E-PAPER
18 Nov 2026, 05:29:55 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಿರಿಯೂರು ಕ್ಷೇತ್ರಕ್ಕೇಕೆ ಈ ದುರ್ಗತಿ? ಹಣದ ರಾಜಕಾರಣದ ನಡುವೆ ಕಮರುತ್ತಿದೆ ಅಭಿವೃದ್ಧಿಯ ಕನಸು!

ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
​ಶಾಸಕರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ದಿವಂಗತ ಸುಧಾಕರ್ ಅವರ ಅಕಾಲಿಕ ಮರಣದ ನಂತರ, ಹಿರಿಯೂರು ವಿಧಾನಸಭಾ ಕ್ಷೇತ್ರವು ಉಪಚುನಾವಣೆಯ ಹೊಸ್ತಿಲಲ್ಲಿ ಬಂದು ನಿಂತಿದೆ. ಆದರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಕಾಂಕ್ಷಿಗಳ ಪಟ್ಟಿ ಮಾತ್ರ ಬೆಳೆಯುತ್ತಲೇ ಸಾಗಿದೆ. ಯಾರೇ ಬರಲಿ, ಯಾರೆಲ್ಲಾ ಲೀಡರ್ ಅನಿಸಿಕೊಳ್ಳಲಿ; ಒಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಮಾತ್ರ ಶೂನ್ಯ ಎಂಬ ಕಟು ಸತ್ಯ ಈಗ ಹಿರಿಯೂರು ಕ್ಷೇತ್ರದ ಸಾಮಾನ್ಯ ಮತದಾರನಿಗೆ ಮನವರಿಕೆಯಾಗಿದೆ.

​ಇಲ್ಲಿನ ಜನರ ಮೌನ ಈಗ ಒಂದು ಗಂಭೀರ ಪ್ರಶ್ನೆಯನ್ನು ಎತ್ತುತ್ತಿದೆ: "ಚುನಾವಣೆ ಬಂದಾಗ ಪ್ರತ್ಯಕ್ಷವಾಗುವ ಈ ಆಕಾಂಕ್ಷಿಗಳೇ, ಕ್ಷೇತ್ರದ ಜನರಿಗಾಗಿ ನಿಮ್ಮ ಹೋರಾಟದ ಕೊಡುಗೆಯಾದರೂ ಏನು?"

​ಫೋಟೋ ಪೋಸ್ ರಾಜಕಾರಣ vs ರೈತರ ನೈಜ ಹೋರಾಟ:
​ಹಿರಿಯೂರು ತಾಲೂಕು ಎಂದ ತಕ್ಷಣ ನೆನಪಾಗುವುದು ವಿ.ವಿ. ಸಾಗರ ಜಲಾಶಯ. ಈ ಜಲಾಶಯಕ್ಕೆ ಭದ್ರಾ ನೀರನ್ನು ತರುವುದರಲ್ಲಿ ಹಿರಿಯೂರು ತಾಲೂಕಿನ ರೈತರು, ಸಂಘ-ಸಂಸ್ಥೆಗಳು ಮತ್ತು ಜನಸಾಮಾನ್ಯರು ನಡೆಸಿದ ಹೋರಾಟ ಸಾಮಾನ್ಯದ್ದಲ್ಲ. ಈ ಹೋರಾಟದಲ್ಲಿ ಅಂದು ಕೆಲವು ರಾಜಕಾರಣಿಗಳು ಸಾಥ್ ನೀಡಿದ್ದು ನಿಜವಾದರೂ, ಇಂದು ಅವರು ಕಣ್ಮರೆಯಾಗಿದ್ದಾರೆ.

​ಇತ್ತೀಚಿನ ದಿನಗಳಲ್ಲಿ ರಾಜಕಾರಣ ಎನ್ನುವುದು ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳ "ಫೋಟೋ ಪೋಸ್" ಸಂಸ್ಕೃತಿಗೆ ಸೀಮಿತವಾಗಿಬಿಟ್ಟಿದೆ. ನಿರಂತರವಾಗಿ ರೈತರ ಜೊತೆ ನಿಂತು ಮಣ್ಣಿನ ಮಗನಂತೆ ಹೋರಾಡಿದ ನಾಯಕರು ಇಂದು ಯಾರಿದ್ದಾರೆ? ನೀರಾವರಿಗಾಗಿ ಅಂದು ಹೋರಾಡಿದ ಕೆಲವು ನಾಯಕರು ಇಂದು ಹಿಂದೆ ಸರಿದಿದ್ದಾರೆ. ಇದಕ್ಕೆ ಕಾರಣ ನಾಯಕರ ಸ್ವಾರ್ಥವೋ ಅಥವಾ ಮತದಾರರ ಅಸಡ್ಡೆಯೋ ಎಂಬುದು ಯಕ್ಷಪ್ರಶ್ನೆ.

​'ಕೊಡುವುದನ್ನು ಕೊಡಿ, ವೋಟು ಮಾತ್ರ ನಮ್ಮಿಷ್ಟ'- ಮತದಾರರ ನಡೆ
​ಆದರೆ, ಹಿರಿಯೂರು ಕ್ಷೇತ್ರದ ಮತದಾರರೂ ಈಗ ಬುದ್ಧಿವಂತರಾಗಿದ್ದಾರೆ. ರಾಜಕಾರಣಿಗಳು ಕೊಡುವ ಹಣ, ಆಮಿಷಗಳನ್ನು "ಕೊಡುವುದನ್ನು ಕೊಡಿ, ನಾವು ಮಾತ್ರ ಬಿಡುವುದಿಲ್ಲ" ಎಂದು ಕಿತ್ತುಕೊಂಡು, ಕೊನೆಗೆ ಚುನಾವಣೆಯಲ್ಲಿ ಅವರಿಗೆ ಬರಿಗೈ ಮಾಡಿ ಕಳಿಸಲು ಮತದಾರರು ಮುಂದಾಗಿದ್ದಾರೆ. ದುಡ್ಡಿನ ಬಲದಿಂದ ಗೆದ್ದು ಬರಬಹುದು ಅಂದುಕೊಂಡಿರುವ ನಾಯಕರಿಗೆ ಇದು ಮತದಾರರ ಮುನ್ನೆಚ್ಚರಿಕೆ.

​"ನನ್ನ ನಾಯಕ, ನಮ್ಮ ಲೀಡರ್" ಎಂದು ಸ್ವಾರ್ಥಕ್ಕಾಗಿ ನಾಯಕರ ಹಿಂದೆ ತಿರುಗುತ್ತಿರುವ ಇವತ್ತಿನ ಯುವಕರಿಂದ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ? ಜಾತೀಯತೆ ಮತ್ತು ಚಮಚಾಗಿರಿಯಿಂದಾಗಿ ಹಿರಿಯೂರು ತಾಲೂಕು ಇಂದು ಜಿಲ್ಲೆಯಲ್ಲೇ ಅಭಿವೃದ್ಧಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿದೆ.

​ನೀರಾವರಿ ಯೋಜನೆಗಳ ಆಮೆಗತಿ: ಬಾಯಾರಿದ ಹಿರಿಯೂರು
​ತಾಲೂಕಿನಾದ್ಯಂತ ವಿ.ವಿ. ಸಾಗರ ಜಲಾಶಯದ ಕುಡಿಯುವ ನೀರು ಕೊಡುವ ಯೋಜನೆ ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ತಾಂತ್ರಿಕ ಕಾರಣಗಳೋ ಅಥವಾ ರಾಜಕೀಯ ಇಚ್ಛಾಶಕ್ತಿಯ ಕೊರತೆಯೋ, ಇಂದಿಗೂ ವಿ.ವಿ. ಸಾಗರದ ನೀರು ಜನಸಾಮಾನ್ಯರ ಮನೆ ತಲುಪುತ್ತಿಲ್ಲ. ಬೇಸಿಗೆ ಬಂತೆಂದರೆ ಸಾಕು, ಕಣ್ಣೆದುರೇ ಜಲಾಶಯವಿದ್ದರೂ ಕುಡಿಯುವ ನೀರಿಗಾಗಿ ಜನ ತಹತಹಿಸುವ ಪರಿಸ್ಥಿತಿ ಇದೆ.

​ಜೆ.ಜೆ. ಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನವನ್ನು ಹಿಂದಿನ ಸಚಿವರು ಮಾಡಿದ್ದರು. ಆ ಕಾಮಗಾರಿಗೆ ಹಣ ಬಿಡುಗಡೆಯಾಗಿ, ಕೆಲಸ ಇಂದೇ ಆರಂಭವಾಗಲಿ ಎಂಬುದು ರೈತರ ಆಗ್ರಹವಾಗಿದೆ. ಮತ ಕೇಳಲು ಬರುವ ಮುನ್ನ ಜನರಿಗೆ ಕುಡಿಯುವ ನೀರು ಕೊಡಿ ಎಂಬುದು ಮತದಾರರ ನೇರ ಬೇಡಿಕೆಯಾಗಿದೆ.

​ಮೂರು ದಿನದ ಯುಗಾದಿ ಆಟ ಮತ್ತು ಇಂದಿನ ರಾಜಕೀಯ!:
​ಹಿರಿಯೂರು ಕ್ಷೇತ್ರದಲ್ಲಿ ಗೆಲ್ಲಲು ಜಾತಿಯ ಲೆಕ್ಕಾಚಾರಗಳು ಬೇಕಾಗಿಲ್ಲ, ಏಕೆಂದರೆ ಇಲ್ಲಿ ಮನೆಗೊಬ್ಬ ಲೀಡರ್ ಹುಟ್ಟಿಕೊಂಡಿದ್ದಾರೆ. ಕ್ಷೇತ್ರದ ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ​ಹಿಂದೆ ಯುಗಾದಿ ಹಬ್ಬ ಬಂತೆಂದರೆ ಮೂರು ದಿನಗಳ ಕಾಲ ರಾಜ-ರಾಣಿ ತರಹ ಬಿಲ್ಲೆ ತೂರುವ ಆಟವಾಡಿ ಸಂಭ್ರಮಿಸುತ್ತಿದ್ದರು. ​ಇಂದು ಕ್ಷೇತ್ರದ ರಾಜಕೀಯವೂ ಅದೇ ಮೂರು ದಿನದ ಆಟದಂತಾಗಿದೆ.

​"ಕ್ಷೇತ್ರ ಅಭಿವೃದ್ಧಿಯಾದರೆ ನನಗೇನು? ನಾನು ಮತ್ತು ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು" ಎನ್ನುವುದು ಇಂದಿನ ಲೀಡರ್‌ಗಳ ಮನಸ್ಥಿತಿಯಾಗಿದೆ. ಇದರ ಪರಿಣಾಮವಾಗಿ ಬಡವ ಬಡವನಾಗಿಯೇ ಉಳಿಯುತ್ತಿದ್ದಾನೆ, ಶ್ರೀಮಂತ ಮತ್ತಷ್ಟು ಶ್ರೀಮಂತನಾಗುತ್ತಿದ್ದಾನೆ.

​ಮತದಾರರೇ, ಈಗಲಾದರೂ ಎಚ್ಚೆತ್ತುಕೊಳ್ಳಿ!:
​"
ನಾನು.. ನಾನು.." ಎಂದು ಅಧಿಕಾರದ ಆಸೆಗೆ ಬೀಳುವ ನಾಯಕರಿಗಿಂತ, "ಕ್ಷೇತ್ರಕ್ಕಾಗಿ ನಾನೇನು ಮಾಡಿದ್ದೇನೆ" ಎಂದು ತೋರಿಸುವ ನಾಯಕನನ್ನು ಕೈಹಿಡಿಯಲು ಹಿರಿಯೂರು ಜನತೆ ಸಜ್ಜಾಗಬೇಕಿದೆ. ಹಣದ ಆಸೆಗೆ ಬಿದ್ದು ವೋಟ್ ಹಾಕಿದರೆ ಮುಂದಿನ ಐದು ವರ್ಷ ಅಭಿವೃದ್ಧಿ ಕುಂಠಿತವಾಗುವುದು ಗ್ಯಾರಂಟಿ.

​ಹಿರಿಯೂರು ಕ್ಷೇತ್ರದ ಮತದಾರರೇ, ಈಗಲಾದರೂ ಎಚ್ಚೆತ್ತುಕೊಳ್ಳಿ. ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ, ಜಾತಿ-ಹಣದ ಆಮಿಷಗಳಿಗೆ ಬಲಿಯಾಗದೆ, ಯೋಗ್ಯ ಹಾಗೂ ಜನಪರ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ.

 

 

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಸತ್ಯಂ ಶಿವಂ ಸುಂದರಂ' ಎನ್ನುತ್ತಾ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ತಿರುಗೇಟುಬೇಡ್ತಿ-ವರದಾ ನದಿ ಜೋಡಣೆ: ಡಿಪಿಆರ್ ತ್ವರಿತಗೊಳಿಸಲು ಸಚಿವರ ಸೂಚನೆದವಲ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಹೂ ಕೋಸು ನಾರು ಪೂರೈಕೆ:ಬೆಳೆ ನಾಶವಾಗಿ ಕಂಗಾಲಾದ ರೈತಬಸವಣ್ಣನವರ ಮೇಲೆ ಕಳಂಕದ ಮಾತು ಸಲ್ಲದು; ಅವರ ವಚನಗಳೇ ಆರೋಪಗಳಿಗೆ ಕನ್ನಡಿ!ಬಿಲ್ಕಿಸ್ ಬಾನೋ ಪ್ರಕರಣ: 17 ವರ್ಷ ಜೈಲುವಾಸ ಪೂರೈಸಿದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು'ಪ್ರೆಸ್' ಸ್ಟಿಕ್ಕರ್ ಬಳಸಿ ಶವ ಸಾಗಾಟ: ರಾಜಾಜಿನಗರ ಸರಣಿ ಹತ್ಯೆ ಪ್ರಕರಣದಲ್ಲಿ ಆರೋಪಿ ಕರಾಳ ಮುಖ ಬಯಲು!ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಬೇಡ: ಯುರೋಪ್ ರಾಜಕಾರಣಿ ಹೇಳಿಕೆಗೆ ಇಟಲಿ ಸಂಸದೆ ಡೆಬೊರಾ ಬೆರ್ಗಾಮಿನಿ ತಿರುಗೇಟುಯುಪಿ ಚುನಾವಣೆಗೆ ಕಾಂಗ್ರೆಸ್ ರಣತಂತ್ರ: 181 ಸೀಟುಗಳ ಪಟ್ಟಿ ಸಲ್ಲಿಕೆ, ಎಸ್‌ಪಿ ಜೊತೆ ಮಹತ್ವದ ಸಭೆವಿಧಾನ ಪರಿಷತ್‌ನ ನಾಲ್ವರು ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರನಿಗಮ-ಮಂಡಳಿ ನೇಮಕಾತಿ: ಕಾಂಗ್ರೆಸ್‌ನಲ್ಲಿ ಭಿನ್ನಮತ, ಆರ್‌ಎಸ್‌ಎಸ್ ಕಾರ್ಯಕರ್ತರ ಸೇರ್ಪಡೆಗೆ ತೀವ್ರ ಆಕ್ಷೇಪ