Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಾಡು ಹಂದಿ ಬೇಟೆ: ವನ್ಯಜೀವಿ ಕಾಯ್ದೆಯಡಿ ಪೊಲೀಸರೇ ನೇರ ದೂರು ದಾಖಲಿಸುವುದು ಕಾನೂನುಬಾಹಿರ-ಹೈಕೋರ್ಟ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು: 
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ಕಾಡು ಹಂದಿ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಧಿಕೃತ ಅಧಿಕಾರಿ ದೂರು ಸಲ್ಲಿಸದೆ ಪೊಲೀಸರೇ ನೇರವಾಗಿ ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮ್ಮ ವಿರುದ್ಧದ ಆರೋಪಪಟ್ಟಿ ರದ್ದು ಕೋರಿ ರಮೇಶ್ ಎನ್. ಸೇರಿದಂತೆ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

ಕಾಯ್ದೆ ಉಲ್ಲಂಘನೆ: ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 55ರ ಪ್ರಕಾರ, ವನ್ಯಜೀವಿ ಸಂರಕ್ಷಣಾ ನಿರ್ದೇಶಕರು, ಮುಖ್ಯ ವನ್ಯಜೀವಿ ರಕ್ಷಕರು ಅಥವಾ ಸರ್ಕಾರದಿಂದ ಅಧಿಕಾರ ಪಡೆದ ನಿರ್ದಿಷ್ಟ ಅಧಿಕಾರಿಗಳು ದೂರು ನೀಡಿದರೆ ಮಾತ್ರ ನ್ಯಾಯಾಲಯಗಳು ಕಾಗ್ನಿಜೆನ್ಸ್‌ ( cognizance) ಪಡೆದುಕೊಳ್ಳಲು ಅವಕಾಶವಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರೇ ನೇರವಾಗಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿರುವುದು ಕಾನೂನುಬಾಹಿರ ಎಂದು ಪೀಠ ತಿಳಿಸಿದೆ.

Advertisement

ಏರ್ ಗನ್ ಬಿಡುಗಡೆಗೆ ಸೂಚನೆ: ಜಪ್ತಿ ಮಾಡಲಾಗಿದ್ದ 'ಪ್ರೆಸಿಹೋಲ್ ಸ್ಪೋರ್ಟ್ಸ್' ಏರ್ ಗನ್ ಅನ್ನು ಬೇಟೆಗೆ ಬಳಸಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟಿಲ್ಲ. ಅಲ್ಲದೆ, 2016ರ ಶಸ್ತ್ರಾಸ್ತ್ರ ನಿಯಮಾವಳಿ ಪ್ರಕಾರ ಇದನ್ನು ಹೊಂದಲು ಲೈಸನ್ಸ್ ಅಗತ್ಯವಿಲ್ಲದ ಕಾರಣ, ರೂ. 1 ಲಕ್ಷ ಬಾಂಡ್ ಪಡೆದು ಅರ್ಜಿದಾರ ರಮೇಶ್ ಅವರಿಗೆ ಏರ್ ಗನ್ ಅನ್ನು ತನಿಖಾಧಿಕಾರಿಗಳು ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಲಾಗಿದೆ.

ಶಸ್ತ್ರಾಸ್ತ್ರ ಕಾಯ್ದೆ ಅನ್ವಯದ ಬಗ್ಗೆ: ಆರೋಪಿಗಳ ಬಂದೂಕಿಗೆ ನಿಯಮಾನುಸಾರ ಪರವಾನಗಿ ಇರುವುದರಿಂದ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3, 25 ಮತ್ತು 27 ಅನ್ವಯಿಸುವುದಿಲ್ಲ. ಪರವಾನಗಿ ಷರತ್ತುಗಳ ಉಲ್ಲಂಘನೆಯಾಗಿದ್ದರೆ ಕೇವಲ ಸೆಕ್ಷನ್ 30 ಮಾತ್ರ ಅನ್ವಯಿಸುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಮುಂದಿನ ಕ್ರಮಕ್ಕೆ ಅವಕಾಶ: ಪೊಲೀಸರ ಆರೋಪಪಟ್ಟಿ ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕ್ರಿಮಿನಲ್ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆದಾಗ್ಯೂ, ರಾಜ್ಯ ಸರ್ಕಾರದ ಸೂಕ್ತ ಅಧಿಕಾರಿಯು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 55ರ ಅಡಿಯಲ್ಲಿ ನಿಯಮಾನುಸಾರ ಹೊಸದಾಗಿ ದೂರು ದಾಖಲಿಸಿ ಕಾನೂನು ಪ್ರಕ್ರಿಯೆ ಮುಂದುವರಿಸಲು ತನಿಖಾ ಸಂಸ್ಥೆಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.

ಪ್ರಕರಣದ ಹಿನ್ನೆಲೆ: 2019ರ ಆಗಸ್ಟ್ 25ರಂದು ಮುಂಜಾನೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಪರವಾನಗಿ ಹೊಂದಿದ್ದ ಬಂದೂಕಿನಿಂದ ಕಾಡು ಹಂದಿ ಬೇಟೆಯಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ವನ್ಯಜೀವಿ ಮಾಂಸ, 30.06 ಸ್ಪೋರ್ಟಿಂಗ್ ರೈಫಲ್, ಏರ್ ಗನ್ ಹಾಗೂ ಸರಕು ವಾಹನವನ್ನು ಜಪ್ತಿ ಮಾಡಲಾಗಿತ್ತು. 

ನಂತರ ಪೊಲೀಸರು ಶ್ರೀರಂಗಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶಸ್ತ್ರಾಸ್ತ್ರ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಬಿಡುಗಡೆಲಿಂಗನಹಳ್ಳಿ ಗ್ರಾಮದಲ್ಲಿ ವೀರಗಲ್ಲು, ಮಾಸ್ತಿ ಗಲ್ಲು ಪತ್ತೆಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ:ಕೃಷ್ಣಪ್ಪ ಖ್ಯಾತ ನಟ ರಂಗಾಯಣ ರಘು ಭೇಟಿ: 'ಪ್ರೇಮದ ಊರಲ್ಲಿ' ಸಿನಿಮಾ ವೀಕ್ಷಿಸುವಂತೆ ಆತ್ಮೀಯ ಮನವಿಸೊಂಡೆಕೆರೆ ಗ್ರಾಮದ ಬಸಣ್ಣ ನಿಧನಹಿರಿಯ ಪತ್ರಕರ್ತ ಬಂಡಿಗಡಿ ನಂಜುಂಡಪ್ಪ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪಶ್ರೀರಂಗಪಟ್ಟಣದಿಂದ ಮೈಸೂರಿಗೆ ಬಂದ ದಸರಾ ವೈಭವ:…ಮಳೆಯಿಲ್ಲದೆ ಒಣಗಿದ ಜೋಳದ ಹೊಲ ವೀಕ್ಷಿಸಿದ ನಿಖಿಲ್ ಕುಮಾರಸ್ವಾಮಿ; ​HMT ಕಾರ್ಖಾನೆಯ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ರಣತಂತ್ರ: ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮಾಲೋಚನಾ ಸಭೆ