Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಸ ವಿಲೇವಾರಿ ಘಟಕದ ಯಂತ್ರಕ್ಕೆ ಸಿಕ್ಕಿ ಮಹಿಳೆ ಸಾವು

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದ ವೇಳೆ ಶುಕ್ರವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಯಂತ್ರಕ್ಕೆ ಸಿಕ್ಕಿ ಅರಸಮ್ಮ(45) ಮೃತಪಟ್ಟಿರುವ ಘಟನೆ ನಡೆದಿದೆ.

 ಕಸ ವಿಲೇವಾರಿ ಘಟಕದ ಸಮೀಪದಲ್ಲಿನ ಕಾಡುತಿಪ್ಪೂರು ಗ್ರಾಮದ ಅರಸಮ್ಮ ಎಂ.ಎಸ್.ಜಿ.ಪಿ ಕಸವಿಲೇವಾರಿ ಘಟಕದಲ್ಲಿ ಗ್ರೇಟ‌ರ್ ಬೆಂಗಳೂರು ವ್ಯಾಪ್ತಿಯಿಂದ ಬರುವ ಕಸದಲ್ಲಿನ ಪ್ಲಾಸ್ಟಿಕ್ ಅನ್ನು ಯಂತ್ರಗಳಿಂದ ವಿಂಗಡಿಸುವ ಕೆಲಸ ಮಾಡುತ್ತಿದ್ದರು.

Advertisement

ಅಕ್ಟೋಬರ್ 2 ಗಾಂಧಿ ಜಯಂತಿ, ಸರ್ಕಾರಿ ರಜೆ ಇದ್ದರು.  ರಜೆ ದಿನ ಅರಸಮ್ಮ ಎಂಬಾಕೆಗೆ ದೂರವಾಣಿ ಕರೆ ಮಾಡಿ ಕೆಲಸವಿದೆ ಬನ್ನಿ ಎಂದು ಎಂ.ಎಸ್.ಜಿ.ಪಿ. ಘಟಕದ ಅಧಿಕಾರಿಗಳು ಕರೆ ಮಾಡಿದ್ದರು. ಆಕೆ ಕೂಡ ಎಂದಿನಂತೆ ಬೆಳಗ್ಗೆಯೇ ಕೆಲಸಕ್ಕೆ ಹಾಜರಿದ್ದಳು.

ಆದರೆ ದಿನವಿಡೀ ಕಸ ಆಯುತ್ತಿದ್ದ ಅರಸಮ್ಮ, ಇಂದು ಮಾತ್ರ ಕಸ ವಿಂಗಡನೆ ಮಾಡುವ ಯಂತ್ರದ ಬಳಿ ಕೆಲಸಕ್ಕೆ ಮುಂದಾಗಿದ್ದಾಳೆ. ಯಾವುದೇ ಮುಂಜಾಗ್ರತಾ ಸಲಕರಣೆಗಳು, ಸುರಕ್ಷತಾ ಕವಚಗಳಿಲ್ಲದೆ ಕೆಲಸ ಮಾಡುತ್ತಿರುವ ವೇಳೆಯೇ ದುರದೃಷ್ಟವಶಾತ್ ವೇಗವಾಗಿ ತಿರುಗುವ ಯಂತ್ರದ ರಭಸಕ್ಕೆ ಸಿಕ್ಕಿ ದೇಹ ತುಂಡು ತುಂಡುಗಳಾಗಿದೆ. ಅರಸಮ್ಮ ಅವರು ವಿವಾಹದ ಎರಡೇ ವರ್ಷಗಳಲ್ಲಿ ಇವರ ಪತಿಯು ಅಪಘಾತದಲ್ಲಿ ಮೃತಪಟ್ಟಿದ್ದರು.

ಇವರಿಗೆ ಇದ್ದ ಒಬ್ಬಳೆ ಮಗಳನ್ನು ಕಷ್ಟಪಟ್ಟು ಬೆಳೆಸಿ, ವಿವಾಹವನ್ನು ಮಾಡಿಕೊಟ್ಟಿದ್ದರು. ಅರಸಮ್ಮ ಅವರ ಸಹೋದರ ಸಹ ಅಪಘಾತದಲ್ಲಿ ಗಾಯಗೊಂಡಿದದರಿಂದ ವಯಸ್ಸಾಗಿದ್ದ ತಾಯಿಯನ್ನು ಅವರೇ ಪೋಷಣೆ ಮಾಡುತ್ತಿದ್ದರು. ಈಗ ಅರಸಮ್ಮ ಅವರ ಸಾವಿನಿಂದ ಇವರನ್ನು ಪೋಷಣೆ ಮಾಡುವವರು ಯಾರು ಎಂದು ಸ್ದಳೀಯರು ನೋವು ತೋಡಿಕೊಂಡಿದ್ದಾರೆ.

ಮೃತ ಅರಸಮ್ಮ ಅವರ ಪುತ್ರಿಗೆ ಕಸ ವಿಲೇವಾರಿ ಘಟಕದ ಮಾಲೀಕರಿಂದ 35 ಲಕ್ಷ ಪರಿಹಾರವನ್ನು ಸ್ಥಳೀಯರು ಕೊಡಿಸಿದ್ದಾರೆ. ಘಟನೆ ಸಂಬಂದಿಸಿದಂತೆ ದೊಡ್ಡಬೆಳವಂಗಲ ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ  ಮುಂದುವರೆದಿದೆ.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ