Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರೈತರ ಪರ ಧ್ವನಿ ಎತ್ತಲು ಯಶವಂತರಾಯಗೌಡ ಪಾಟೀಲ್ ರಾಜೀನಾಮೆ: ಡಿಕೆಶಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಯತ್ನವು ರೈತರ ಬದುಕಿಗಾಗಿ ಹೊರತು, ಕೆ.ಎಸ್. ಈಶ್ವರಪ್ಪ ಹಿಂದೆ ಹೇಳಿದ್ದಂತೆ ಜನರನ್ನು ಕೊಟ್ಟು ಕೊಳ್ಳುವ ರಾಜೀನಾಮೆ ಅಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕೋರ್ ಅವರು ವಿರೋಧ ಪಕ್ಷಗಳಿಗೆ ಸ್ಪಷ್ಟ ತಿರುಗೇಟು ನೀಡಿದ್ದಾರೆ.

ವಿಧಾನಸಭೆಯಲ್ಲಿ ಬುಧವಾರ ನಡೆದ ಬರ ವಿಚಾರದ ಮೇಲಿನ ಚರ್ಚೆಯ ವೇಳೆ ವಿಪಕ್ಷಗಳು ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಪತ್ರದ ಪ್ರತಿಯನ್ನು ಪ್ರದರ್ಶಿಸಿ ಗದ್ದಲ ಎಬ್ಬಿಸಿದಾಗ, ಸಿಎಂ ಪರವಾಗಿ ಸ್ಪಷ್ಟನೆ ನೀಡಿ ಡಿ.ಕೆ. ಶಿವಕುಮಾರ್ ಮಾತನಾಡಿದರು.

Advertisement

ರೈತರ ಹಿತಕ್ಕಾಗಿ ರಾಜೀನಾಮೆ ಯತ್ನ: ತಮ್ಮ ಕ್ಷೇತ್ರದ ರೈತರು ಸಾಲ ಮಾಡಿ ಬೆಳೆ ಹಾಕಿ ಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ಪರಿಹಾರ ಸಿಗಬೇಕೆಂದು ಒತ್ತಾಯಿಸಿ ಯಶವಂತರಾಯಗೌಡ ಪಾಟೀಲ್ ಭಾವನಾತ್ಮಕವಾಗಿ ರಾಜೀನಾಮೆಗೆ ಮುಂದಾಗಿದ್ದಾರೆ ವಿನಃ ಬೇರೆ ಕಾರಣಕ್ಕಲ್ಲ ಎಂದು ಸ್ಪಷ್ಟಪಡಿಸಿದರು.

ಈಶ್ವರಪ್ಪ ಹೇಳಿಕೆಗೆ ಟಾಂಗ್: ವಿಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದ ಅವರು, "ಈಶ್ವರಪ್ಪ ಅವರು ಹಿಂದೆ 15 ಜನ ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರ ಅಸ್ಥಿರಗೊಳಿಸುವುದಾಗಿ ಹೇಳಿದರಲ್ಲ, ಆ ರೀತಿಯ ಕೊಟ್ಟು ತೆಗೆದುಕೊಳ್ಳುವ ರಾಜೀನಾಮೆ ಇದಲ್ಲ" ಎಂದು ವ್ಯಂಗ್ಯವಾಡಿದರು.

ಬರ ನಿರ್ವಹಣೆ ಸರ್ಕಾರದ ಹೊಣೆ: ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಸರ್ಕಾರ ಯಾವುದೇ ಪಕ್ಷಭೇದ ಮಾಡದೆ 224 ಕ್ಷೇತ್ರಗಳನ್ನು ಒಂದೇ ಸಮನಾಗಿ ನೋಡಿಕೊಳ್ಳುತ್ತಿದೆ. ಮಾರ್ಗಸೂಚಿಗಳ ಅನ್ವಯವೇ ಬರ ಘೋಷಣೆ ಮಾಡಲಾಗುತ್ತಿದ್ದು, ನನ್ನದೇ ಸ್ವಂತ ಕ್ಷೇತ್ರದ ಒಂದಷ್ಟು ಭಾಗದಲ್ಲಿ ಮಳೆಯಾಗದಿದ್ದರೂ ನಾನು ಪ್ರತ್ಯೇಕ ಒತ್ತಡ ಹಾಕಿಲ್ಲ ಎಂದರು.

ಮೋಡ ಬಿತ್ತನೆ ಪ್ರಯತ್ನ: ಎಲ್ಲರ ಒತ್ತಡದ ಮೇರೆಗೆ ಮೋಡ ಬಿತ್ತನೆ ಪ್ರಯೋಗಕ್ಕೂ ಸರ್ಕಾರ ಮುಂದಾಗಿದ್ದು, ಮೋಡಗಳ ಲಭ್ಯತೆಗೆ ತಕ್ಕಂತೆ ಇದು ಕೆಲವು ಕಡೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಸಚಿವರು, ಶಾಸಕರು ಜವಾಬ್ದಾರಿಯಿಂದ ವರ್ತಿಸಬೇಕು:
ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಆತುರದ ರಾಜಕಾರಣ ಮಾಡುತ್ತಿವೆ ಎಂದು ದೂರಿದ ಡಿ.ಕೆ. ಶಿವಕುಮಾರ್, "ಜನರು ನಮ್ಮನ್ನು 5 ವರ್ಷಗಳ ಕಾಲ ಸೇವೆ ಮಾಡಲು ಆಯ್ಕೆ ಮಾಡಿದ್ದಾರೆ. ಹೀಗಾಗಿ ವಿಪಕ್ಷಗಳೂ ಕೂಡ ಸದನದಲ್ಲಿ ಜನರ ಧ್ವನಿಯಾಗಿ ಮುಕ್ತವಾಗಿ ಚರ್ಚೆ ನಡೆಸಬೇಕು ಹೊರತು ಆತುರದ ನಿರ್ಧಾರಗಳನ್ನು ಕೈಗೊಳ್ಳಬಾರದು" ಎಂದು ಕಿವಿಮಾತು ಹೇಳಿದರು.

ಯಶವಂತರಾಯಗೌಡ ಪಾಟೀಲ್ ಅವರೊಂದಿಗೆ ತಾವೇ ಸ್ವತಃ ಮಾತನಾಡಿ ಸಮಾಧಾನಪಡಿಸಿ ಕಳುಹಿಸಿರುವುದಾಗಿ ತಿಳಿಸಿದ ಅವರು, ತಮ್ಮ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸಲು ಮುಂದಾದವರ ಭಾವನೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ತಿಳಿಸಿದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಲಿಕುಂಟೆ ಹೋಬಳಿಯ ಕೆರೆಗಳಿಗೆ ನೀರು ಹರಿಸಲು ಸಾರ್ವಜನಿಕರ ಆಗ್ರಹ; ಡಾ. ಟಿ.ಬಿ. ಜಯಚಂದ್ರ ಮುಖಾಂತರ ಶೀಘ್ರ ಕ್ರಮಕ್ಕೆ ನಿರೀಕ್ಷೆಶಾಸಕ ಧೀರಜ್ ಮುನಿರಾಜು ರವರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡನೀಯಆಯುರ್ವೇದ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳನ್ನು ಕೌನ್ಸಸಿಲಿಂಗ್ ಮೂಲಕ ಬೇರೆ ಕಾಲೇಜಿಗೆ ವರ್ಗಾವಣೆನಾಗೇನಹಳ್ಳಿ-ನೆಲಗುದಿಗೆ ಸಂಪರ್ಕ ರಸ್ತೆ ಸಂಪೂರ್ಣ ಗುಂಡಿ ಮಯಮದ್ಯಪಾನ ನಿಷೇಧದ ಪರವಾಗಿ ಮಠಾಧಿಪತಿಗಳ ಧೃಡ ನಿಲುವು ಜನಾಂದೋಲನ ರೂಪಿಸಿ-ಶ್ರೀ ಪಂಡಿತಾರಾಧ್ಯ ಶಿವಾಚಾರ್ಯಮಹಿಳೆಯರಿಗೆ ಬ್ಯೂಟಿಷಿಯನ್ ಉದ್ಯಮಶೀಲತಾಭಿವೃದ್ಧಿ ತರಬೇತಿಜ್ಯೋತಿ ದ್ಯಾಮೇಶ್, 2 ವರ್ಷದ ಮಗು ನಾಪತ್ತೆಮುಜರಾಯಿ ಇಲಾಖೆಗೆ ಕಣಿವೆಮಾರಮ್ಮ ದೇವಸ್ಥಾನ ಸೇರಿಸಲು ಮನವಿಪೌರ ಕಾರ್ಮಿಕರು ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು- ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿದೇಗುಲದ ಅಭಿವೃದ್ಧಿಗೆ 2 ಲಕ್ಷ ಸಹಾಯಧನ ವಿತರಣೆ