ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಎಫ್‌ಇ ಶೋಜಿ ಜೊತೆ ಹುಬ್ಬಳ್ಳಿ NGEF ಪುನರುಜ್ಜೀವ – ಕರ್ನಾಟಕದ ಇವಿ ಭವಿಷ್ಯಕ್ಕೆ ಹೊಸ ಶಕ್ತಿ! ಬರಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಜೆಎಫ್‌ಇ ಶೋಜಿ ಸಂಸ್ಥೆಯ ಪ್ರಮುಖರೊಂದಿಗೆ ಕರ್ನಾಟಕದಲ್ಲಿ ಅವರ ವಿಸ್ತರಣೆ ಕುರಿತು ಅರ್ಥಪೂರ್ಣ ಚರ್ಚೆ ನಡೆಸಿದೆವು.
ಜೆಎಫ್‌ಇ ಶೋಜಿ ಸಂಸ್ಥೆ 400 ಕೋಟಿ ಹೂಡಿಕೆ ಮೂಲಕ BEVs/EVs ಗಾಗಿ ಮೋಟಾರ್ ಕೋರ್ ತಯಾರಿಕಾ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸಲು ಬದ್ಧವಾಗಿದೆ. ಇದು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ಇವಿ ಸರಪಳಿಯನ್ನು ಬಲಪಡಿಸಲಿದೆ.
ಯೋಜನೆಗೆ ಭೂಮಿಯ ಆಯ್ಕೆ ಅಂತಿಮ ಹಂತದಲ್ಲಿದ್ದು, ಸರ್ಕಾರದಿಂದ ಎಲ್ಲರೀತಿಯ ಸಹಕಾರ ದೊರೆಯಲಿದೆ. ಪವರ್ ಟ್ರಾನ್ಸ್‘ಫಾರ್ಮರ್ ಕ್ಷೇತ್ರದಲ್ಲಿ ಜೆಎಫ್‌ಇಯ ಸಾಮರ್ಥ್ಯವನ್ನು ಬಳಸಿಕೊಂಡು ಹುಬ್ಬಳ್ಳಿ #NGEF ಪುನರುಜ್ಜೀವ ಮಾಡುವ ಬಗೆಗೂ ಚರ್ಚೆ ನಡೆಸಿದೆವು.
ಮುಂದಿನ ಹಂತಗಳ ಚರ್ಚೆಗಾಗಿ ಹುಬ್ಬಳ್ಳಿ ಘಟಕಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದೆವು ಎಂದು ಸಚಿವರು ತಿಳಿಸಿದರು.

