ಲಂಡನ್ ನಗರದ ಥೇಮ್ಸ್ ನದಿ ಮಾದರಿಯಲ್ಲಿ ಅರ್ಕಾವತಿ ನದಿ ದಡ ಅಭಿವೃದ್ಧಿ-ನಿಖಿಲ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಭಿವೃದ್ಧಿಯ ಹರಿಕಾರ- ದೂರದೃಷ್ಟಿಯ ನಾಯಕ ಕುಮಾರಣ್ಣ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರ 2007-08 ರ ಕನಸಿನ ಯೋಜನೆ ಲಂಡನ್ ನಗರದ ಥೇಮ್ಸ್ ನದಿ ಮಾದರಿಯಲ್ಲಿ ರಾಮನಗರದ ಅರ್ಕಾವತಿ ನದಿ ದಡ ಅಭಿವೃದ್ಧಿ.

- Advertisement - 

ಅಂದು ರಾಮನಗರ – ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅರ್ಕಾವತಿ ನದಿ ದಡ ಅಭಿವೃದ್ಧಿಯ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಕುಮಾರಣ್ಣನವರು 2018ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಯೋಜನೆ ತಾಂತ್ರಿಕ ಮತ್ತು ಆರ್ಥಿಕ ಅನುಮೋದನೆ ನೀಡಲಾಗಿತ್ತು. ಈಗ 156 ಕೋಟಿ ವೆಚ್ಚದಲ್ಲಿ  ಯೋಜನೆ ಜಾರಿ ಆಗುತ್ತಿದೆ ಎಂದು ನಿಖಿಲ್ ತಿಳಿಸಿದ್ದಾರೆ.

- Advertisement - 

ರಾಮನಗರದ ಅರ್ಕಾವತಿ ನದಿ ನಗರದ ಮಧ್ಯ ಭಾಗದಲ್ಲಿ ಸುಮಾರು 4 ರಿಂದ 5 ಕಿ.ಮೀ ಉದ್ದ ಹರಿಯಲಿದ್ದು, ಇದರಲ್ಲಿ ನದಿಯ ಎಡ ಭಾಗದಲ್ಲಿ ಸುಮಾರು 1.75 ಕಿ.ಮೀ ಹಾಗೂ ಬಲ ಭಾಗದಲ್ಲಿ 1.75 ಕಿ.ಮೀ ಸೇರಿ ಒಟ್ಟಾರೆ 3.50 ಕಿಲೋ ಮೀಟರ್‌ ಉದ್ದಕ್ಕೆ ಸೈಡ್‌ವಾಲ್‌ ನಿರ್ಮಾಣವಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

 

 

 

 

Share This Article
error: Content is protected !!
";