ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ #GBA ವ್ಯಾಪ್ತಿಯ ನೂತನ ಐದು ಪಾಲಿಕೆಗಳ ಚುನಾವಣೆಗಳ ವ್ಯಾಪ್ತಿಯಲ್ಲಿ ಪಕ್ಷದ ಬಲವರ್ಧನೆ ಹಾಗೂ ಸಂಘಟನೆ ಹಾಗೂ ಚುನಾವಣೆಗೆ ತಯಾರಿ, ಸೇರಿ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಉಸ್ತುವಾರಿ ಸಮಿತಿ ಸದಸ್ಯರೂಗಳೊಂದಿಗೆ ಸಭೆ ನಡೆಸಲಾಯಿತು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸಭೆಯಲ್ಲಿ ಚುನಾವಣಾ ಪೂರ್ವ ಸಿದ್ದತೆ ಬಗ್ಗೆ ಪೂರಕ ವರದಿಯನ್ನು ಸಲ್ಲಿಸುವಂತೆ ವಿಧಾನಸಭಾ ಉಸ್ತುವಾರಿ ಸಮಿತಿ ಸದಸ್ಯರೂಗಳೊಂದಿಗೆ ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು ಎಂದು ನಿಖಿಲ್ ತಿಳಿಸಿದ್ದಾರೆ.
ಇನ್ನು ನಗರಪಾಲಿಕೆ ಉಸ್ತುವಾರಿ ಸಮಿತಿಗಳಿಗೆ ಬೂತ್ ಮಟ್ಟದ ಏಜೆಂಟ್ಸ್ ಗಳನ್ನು ನೇಮಕ ಮಾಡುವ ವಿಚಾರದ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.

