ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದಿನ ಸಂವಹನ ವ್ಯವಸ್ಥೆಯಲ್ಲಿ ಸೋಶಿಯಲ್ ಮೀಡಿಯಾ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ನೀವೆಲ್ಲರೂ ತೆರೆಯ ಮರೆಯಲ್ಲಿ ನಿಂತು ನನ್ನ ಶಕ್ತಿಯಾಗಿ ಕೆಲಸ ಮಾಡಿದ್ದೀರಿ. ನಿಮ್ಮ ಶ್ರಮ ಮತ್ತು ಸಮಯವನ್ನು ವಿನಿಯೋಗಿಸಿ ನನ್ನ ಹಾಗೂ ನಮ್ಮ ಪಕ್ಷದ ಆಶಯಗಳನ್ನು ಕರ್ನಾಟಕದ ಮನೆಮನೆಗೂ ತಲುಪಿಸಿದ್ದೀರಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಧನ್ಯವಾದ ಅರ್ಪಿಸಿದ್ದಾರೆ.
ನನ್ನ ಹೆಸರಿನಲ್ಲಿ ಅನೇಕ ಅಭಿಮಾನಿ ಪುಟಗಳನ್ನು (Fan Pages) ಸೃಷ್ಟಿಸಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹಗಲಿರುಳು ಕೆಲಸ ಮಾಡುತ್ತಿರುವ ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಋಣಿ. ನನ್ನ ಆಲೋಚನೆಗಳನ್ನು ಮತ್ತು ನಾಡಿನ ಪರವಾದ ನಮ್ಮ ಧ್ವನಿಯನ್ನು ಜನಸಾಮಾನ್ಯರಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸಲು, ನಿಮ್ಮೊಂದಿಗೆ ವೈಯಕ್ತಿಕವಾಗಿ ಸಂಪರ್ಕದಲ್ಲಿರಲು ಮತ್ತು ನಿಮ್ಮನ್ನು ನನ್ನ ಅಧಿಕೃತ ತಂಡದ ಭಾಗವಾಗಿಸಿಕೊಳ್ಳಲು ನಾನು ಇಚ್ಛಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಬನ್ನಿ, ಒಟ್ಟಾಗಿ ಬೆಳೆಯೋಣ. ಜನತಾದಳದ ಸಿದ್ಧಾಂತಗಳನ್ನು ಡಿಜಿಟಲ್ ಲೋಕದಲ್ಲಿ ಮತ್ತಷ್ಟು ಬಲವಾಗಿ ಪಸರಿಸೋಣ. ನನ್ನ ತಂಡದ ಭಾಗವಾಗಲು ಹಾಗೂ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ: forms.gle/yZV7ryeJuNGVur…ಗುಂಪಿಗೆ ಸೇರ್ಪಡೆಯಾಗಿ ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

