ವಾಯುಪಡೆ ಅಧಿಕಾರಿಯಿಂದ ಅಮಾನುಷವಾಗಿ ಹಲ್ಲೆಗೊಳಗಾದ ವಿಕಾಸ್ ಕುಮಾರ್ ಸಂಪರ್ಕಿಸಿದ ನಿಖಿಲ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಸಿ.ವಿ ರಾಮನ್ ನಗರದ ಬಳಿ ವಾಯುಪಡೆ ಅಧಿಕಾರಿಯೊಬ್ಬರಿಂದ ಅಮಾನುಷವಾಗಿ ಹಲ್ಲೆಗೊಳಗಾದ ವಿಕಾಸ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ
, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಡೆದಿದ್ದಾರೆ.

 ಈ ಸಂಧರ್ಭದಲ್ಲಿ ವಿಕಾಸ್ ಅವರು, ಮೊನ್ನೆ ನಡೆದ  ದುರದೃಷ್ಟಕರ ಘಟನೆಯಿಂದ ಅವರ ವೈಯಕ್ತಿಕ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದೂ ಸಹ ನನ್ನ ಗಮನಕ್ಕೆ ಬಂದಿರುತ್ತದೆ.

ಈ ವಿಷಯವನ್ನೂ ಕೂಡ ಅವರೊಂದಿಗೆ ಚರ್ಚಿಸಿ ಮುಂದೆ ಬರುವ ಕಾನೂನಾತ್ಮಕ ಹಾಗೂ ಇತರೆ ಸಮಸ್ಯೆಗಳನ್ನು ಎದುರಿಸುವುದಕ್ಕಾಗಿ ಅವರ ಬೆನ್ನಿಗೆ ನಿಲ್ಲುವುದಾಗಿ ನಿಖಿಲ್ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಅವರು ಟ್ಯಾಗ್ ಮಾಡಿದ್ದಾರೆ.

 

Share This Article
error: Content is protected !!
";