ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇತ್ತೀಚೆಗೆ ನಿಧನರಾದ ಜೆಡಿಎಸ್ ಹಿರಿಯ ಮುಖಂಡ ಹಾಡೋನಹಳ್ಳಿ ಅಪ್ಪಯ್ಯಣ್ಣನವರ ನಿವಾಸಕ್ಕೆ ಹಾಗೂ ಸಮಾಧಿಗೆ ಬಳಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಸುದೀರ್ಘ ರಾಜಕಾರಣದಲ್ಲಿದ್ದ ಅಪ್ಪಯ್ಯಣ್ಣನವರು ಬೆಂಗಳೂರು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಬಮುಲ್ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಹೀಗೆ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಉಳಿಸಿಕೊಂಡಿದ್ದರು.
ಅವರ ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಇನ್ನು ಕರ್ನಾಟಕವನ್ನು ಅನೇಕ ನಾಯಕರು, ಪಕ್ಷಗಳು ಆಳ್ವಿಕೆ ಮಾಡಿವೆ. ಆದರೆ ಈ ಸರಕಾರ ಪ್ರತಿನಿತ್ಯ ಹಗರಣದಲ್ಲಿ ಮುಳುಗಿದೆ. ರಾಜ್ಯದಲ್ಲಿ ನೇರವಾಗಿ ಸಿಎಂ ಅವರು ಸಿಲುಕಿರುವುದು ನೋಡಿದ್ದೀರಿ.
ಅನೇಕ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ದುರ್ಬಳೆ ಮಾಡಿದ್ದಾರೆ,ಆ ಹಣವನ್ನ ಪಕ್ಕದ ರಾಜ್ಯಗಳ ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಇಂಥ ಕೀಳು ಸರಕಾರವನ್ನು ಇದೇ ಮೊದಲಬಾರಿಗೆ ನೋಡಿರುವುದು ಎಂದರು.
ಪ್ರಿಯಾಂಕ ಖರ್ಗೆ ಪೆನ್ ಡ್ರೈವ್ ಪ್ರಶ್ನೆ ವಿಚಾರ-
ಬೇರೆ ಪೆನ್ ಡ್ರೈವ್ ನ್ನು ಯಾವ ಒಬ್ಬ ಮಹಾನುಭಾವ ಬಿಡುಗಡೆ ಮಾಡಿದ ಎಂದು ಎಲ್ಲರಿಗೂ ಗೊತ್ತಿದೆ. ಹೆಣ್ಣು ಮಕ್ಕಳ ಮಾನ ಸಾರ್ವಜನಿಕವಾಗಿ ಕಳೆಯುವಂತ ಪ್ರಯತ್ನ ಆಗಿದೆ. ಕನಿಷ್ಠ ಪಕ್ಷ ಹೆಣ್ಣು ಮಕ್ಕಳ ಬ್ಲರ್ ಮಾಡಿ ಬಿಡುಗಡೆ ಮಾಡಬೇಕು ಎಂಬ ಪರಿಜ್ಞಾನ ಇಲ್ಲದೇ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನನೇ ಪಾಠ ಕಲಿಸುತ್ತಾರೆ, ಅಲ್ಲಿಯವರೆಗು ಕಾಯಬೇಕು ಎಂದರು.
ನಿಖಿಲ್ ಸೋಲಿನ ವಿಚಾರ-ಕುಮಾರಸ್ವಾಮಿಯವರು ಕೇಂದ್ರದ ಸಚಿವರಾಗಿ ಪಾರ್ಲಿಮೆಂಟ್ ನಲ್ಲಿ ಬಹಳ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯಕ್ಕೆ ಯಾವ ರೀತಿ ಕೊಡುಗೆ ನೀಡಬೇಕು, ಉದ್ಯೋಗ, ಕೈಗಾರಿಕೆ ತರಬೇಕು ಎಂದು ನಿದ್ದೆಗೆಡುತ್ತಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ಹರೀಶ್ ಗೌಡ, ದೊಡ್ಡಬಳ್ಳಾಪುರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ದೇವರಾಜಮ್ಮ ಸೇರಿದಂತೆ ತಾಲ್ಲೂಕಿನ ಪ್ರಮುಖ ಮುಖಂಡರು ಜತೆಯಲ್ಲಿದ್ದರು.