ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತೆ!” ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ವಿಧಾನಸೌಧದ ಕಾರ್ಯಕ್ರಮ ನಾವೂ ಮಾಡಿದ್ದು, ಚಿನ್ನಸ್ವಾಮಿಯಲ್ಲಿ KSCA ಹಾಗೂ RCB ಅವರು ಮಾಡಿದ್ದರು ಅದು ನಮ್ಮ ಗಮನಕ್ಕೆ ಇರಲಿಲ್ಲ ಎಂದು ಹೇಳಿರುವುದು “ಹಸಿ ಸುಳ್ಳು” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರಿದ್ದಾರೆ.
KSCA ನೇ DPAR ಕಾಯರ್ದರ್ಶಿಗೆ ಬರೆದ ಪತ್ರದಲ್ಲಿ ವಿಧಾನಸೌಧ ಮೆಟ್ಟಿಲುಗಳ ಮೇಲೆ ಆಟಗಾರರಿಗೆ ಸನ್ಮಾನ ಮಾಡುವಂತೆ ಕೋರಿ ಬರೆದ ಪತ್ರ ಇಲ್ಲಿದೆ. ಆದರೆ ಸರ್ಕಾರ ಮಾತ್ರ ಹಸಿಸುಳ್ಳು ಹೇಳಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಈ ಕಾರ್ಯಕ್ರಮವನ್ನು ಮುಂದೂಡಲು ಕೋರಿದರು ಕೂಡ ನೀವು ಅವರ ಮಾತಿಗೆ ಬೆಲೆ ಕೊಡದೇ ಕಾರ್ಯಕ್ರಮ ಆಯೋಜನೆ ಮಾಡಿ 11 ಜನರ ಬಲಿದಾನಕ್ಕೆ ಕಾರಣರಾಗಿದ್ದೀರಿ ಎಂದು ನಿಖಿಲ್ ಹರಿಹಾಯ್ದರು.
ಗೃಹ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳೇ (ರೀಲ್ಸ್ ಮಿನಿಸ್ಟರ್)ನೈತಿಕೆ ಹೊಣೆಹೊತ್ತು ರಾಜೀನಾಮೆ ನೀಡಿ, ನೆಲದ ಕಾನೂನಿಗೆ ಗೌರವ ನೀಡುವಂತೆ ಅವರು ಆಗ್ರಹಿಸಿದ್ದಾರೆ.