ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ತಯಾರಿ ಕುರಿತಂತೆ ಬಿಡದಿಯ ತೋಟದ ಮನೆಯಲ್ಲಿ ಶನಿವಾರ ಸಿದ್ಧತಾ ಸಭೆಯನ್ನು ನಡೆಸಲಾಯಿತು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆ ಕರೆದಿದ್ದೇವೆ. ಈಗಾಗಲೇ ಜಿಪಂ ಕ್ಷೇತ್ರವಾರು ಹಾಗೂ ನಗರ ಪ್ರದೇಶಗಳಲ್ಲಿ ಸಭೆ ನಡೆಸಿದ್ದೇವೆ. ಅತೀ ಶೀಘ್ರದಲ್ಲಿ ಚುನಾವಣೆ ಘೋಷಣೆ ಆಗುತ್ತೆ. ಚನ್ನಪಟ್ಟಣ ಜನತಾದಳದ ಭದ್ರಕೋಟೆ ಅನ್ನೋದರಲ್ಲಿ ಅನುಮಾನ ಇಲ್ಲ. ಪ್ರತಿ ಚುನಾವಣೆಯಲ್ಲೂ ನಮಗೆ ನಮ್ಮದೇ ಆದ ಮತಗಳಿವೆ. ಕ್ಷೇತ್ರದಲ್ಲಿ ಕಾರ್ಯಕರ್ತರೇ ಚುನಾವಣೆ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಈ ಬಾರಿ ಉಪಚುನಾವಣೆ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿದೆ. ಚನ್ನಪಟ್ಟಣ ಕುಮಾರಸ್ವಾಮಿ ಅವರ ಸ್ವಕ್ಷೇತ್ರ. ಚುನಾವಣೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಿದೆ. ಅಭ್ಯರ್ಥಿ ಆಯ್ಕೆ, ಚುನಾವಣೆ ಜವಾಬ್ದಾರಿ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.
ನಾನು ಅನೇಕ ಬಾರಿ ತಿಳಿಸಿದ್ದೇನೆ. ಇಲ್ಲಿ ಅಭ್ಯರ್ಥಿ ಯಾರಾದ್ರೂ ಆಗಬಹುದು. ಬೂತ್ ವೈಸ್ ಸರ್ವೇ ಮಾಡಿಸಿದ್ದೇವೆ. ನೀವು ಹೇಗೆ ಲೆಕ್ಕಾ ಹಾಕಿದ್ರೂ 80 ಸಾವಿರ ಮತ ನಿರಂತರವಾಗಿ ಜೆಡಿಎಸ್ ಪಕ್ಷದ ಮೇಲಿದೆ.
ಯಾರೇ ಅಭ್ಯರ್ಥಿ ಆದ್ರೂ ಈ ಮತಗಳು ಪಕ್ಷಕ್ಕೆ ಬರುತ್ತೆ. ನಿಖಿಲ್ ಕುಮಾರಸ್ವಾಮಿ ಅವರೇ ಬಂದು ಸ್ಪರ್ಧೆ ಮಾಡಬೇಕು ಅಂತೇನಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತ ನಿಂತ್ರೂ ಗೆಲ್ತಾರೆ. ನೀವು ಯಾವುದೇ ರೀತಿ ಲೆಕ್ಕಾ ಹಾಕಿದ್ರೂ 80 ಸಾವಿರ ಮತಗಳು ಜೆಡಿಎಸ್ ಗೆ ಇವೆ.
ಒಳ್ಳೇ ಲೀಡ್ ಬೇಕು ಅಂದ್ರೆ ಹೆಚ್ಚಿಗೆ 20 ಸಾವಿರ ವೋಟ್ ತಗೋಬೇಕು ಅಷ್ಟೇ. ಅಂತಿಮವಾಗಿ ಎನ್ ಡಿಎ ಪಕ್ಷದ ನಾಯಕರು ಕೂತು ಚರ್ಚೆ ಮಾಡ್ತಾರೆ ಎಂದು ತಿಳಿಸಿದ್ದಾರೆ.