ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿ ಕೆ ಶಿವಕುಮಾರ್ ಸಮಾವೇಶ ಮಾಡಿದರೂ ಕಾಂಗ್ರೆಸ್ಗೆ. ಅಹಿಂದ ನಾಯಕ ಸಿದ್ದರಾಮಯ್ಯ ಸಮಾವೇಶ ಮಾಡಿದರೂ ಕಾಂಗ್ರೆಸ್ಗೆ ಮಾಡೋದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಸಮಾವೇಶ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಲೀಡರ್, ಐಡಿಯಾಲಜಿ ಎಲ್ಲಾ ಒಂದೇ ಆಗಿದೆ. ಆದರೆ, ಬ್ಯಾನರ್ ಚೇಂಜ್ ಆಗಿದೆ ಅಷ್ಟೇ. ಅಹಿಂದ ಅಂದ್ರೆ ಕಾಂಗ್ರೆಸ್, ಅವರು ಕಾಂಗ್ರೆಸ್ ಬಿಟ್ಟಿಲ್ಲ.ಅಹಿಂದದವರು ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಮತ ಹಾಕಲ್ಲ ಎಂದರು.
ಸತೀಶ್ ಜಾರಕಿಹೊಳಿ 2028ಕ್ಕೆ ಸಿಎಂ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ನಾನು ಈಗ ಕ್ಲೇಮ್ ಮಾಡುತ್ತಿಲ್ಲ. 2028ಕ್ಕೆ ಸಿಎಂ ಅಂತ ಹೇಳಿದ್ದೇನೆ. ನಾನು ಸಿಎಂ ಆಕಾಂಕ್ಷಿ ಅಂತ ಅಷ್ಟೇ ಹೇಳ್ತಿರೋದು. ನನ್ನಂತೆ ಆಕಾಂಕ್ಷಿಗಳು ಇರ್ತಾರೆ. ನಾನೇ ಆಗ್ತೇನೆ ಅಂತ ಏನೂ ಹೇಳ್ತಿಲ್ಲ. ಅಲ್ಲಿಯವರೆಗೆ ಈ ಹುದ್ದೆ ಆಕಾಂಕ್ಷಿ ನಾನಲ್ಲ ಎಂದು ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಡಿಸಿಎಂ ನೀಡಿರುವ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸುತ್ತೆ. ಒಪ್ಪಂದ ದೆಹಲಿಯಲ್ಲೇ ಆಗಿರಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದು ಹೈಕಮಾಂಡ್ ಮಟ್ಟದಲ್ಲಿ ನಡೆದಿರಬಹುದು. ಅವರಿಗಷ್ಟೇ ಗೊತ್ತು, ನಮಗೆ ಗೊತ್ತಿಲ್ಲ. ಡಿ.ಕೆ. ಸುರೇಶ್ ಸಹ 5 ವರ್ಷ ಅವರೇ ಇರ್ತಾರೆ ಅಂದ್ರಲ್ಲ. ಅದಕ್ಕೆ ಅವರ ಆಪ್ತರು ಹೇಳ್ತಾರೆ. ಸಿಎಂ ವಿಚಾರದ ಒಪ್ಪಂದದ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದರು.
ಮುಡಾ ಅಕ್ರಮದ ಬಗ್ಗೆ ಇಡಿ ಲೋಕಾಯುಕ್ತಕ್ಕೆ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಆಧಾರದಮೇಲೆ ಕೊಟ್ಟಿದ್ದಾರೆ ಗೊತ್ತಿಲ್ಲ. ಲೀಗಲ್ ಟೀಂ ಎಲ್ಲವನ್ನ ನೋಡಿಕೊಳ್ಳುತ್ತೆ. ಇಡಿಯವರು ಮನಿಲಾಂಡ್ರಿಂಗ್ ಕೇಸ್ ಅಷ್ಟೇ ಮಾಡಬೇಕು.
ಮುಡಾ ಹಗರಣದ ತನಿಖೆಯಲ್ಲೇ ಗೊಂದಲವಿದೆ. ಈ ಬಗ್ಗೆ ಸುಪ್ರೀಂನಲ್ಲಿ ಹಲವು ಪಿಟಿಷನ್ಗಳಿವೆ. ಅಲ್ಲಿ ಇನ್ನೂ ತೀರ್ಮಾನವಾಗಿಲ್ಲ. ಹಾಗಾಗಿ ಏಕೆ ಕೊಟ್ರು, ಏನು ಅನ್ನೋದು ಗೊತ್ತಿಲ್ಲ. ಲೋಕಾಯುಕ್ತದವರು ತನಿಖೆ ಮಾಡ್ತಿದ್ದಾರೆ. ಎಲ್ಲವನ್ನು ಲೀಗಲ್ ಟೀಂ ಇದೆ ನೋಡುತ್ತೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಮಾತನಾಡಿ, ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಏನೂ ಹೇಳಿಲ್ಲ. ಯಾವ ಒತ್ತಡವೂ ನನಗೆ ಬಂದಿಲ್ಲ. ಅದನ್ನು ನಾನು ಕೇಳಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.