ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿಯವರು ತಿಳಿಸಿದಂತೆ ಯಾರೂ ಪರಕೀಯರಲ್ಲ ಎಲ್ಲರೂ ನಮ್ಮವರೇ ಎಂಬ ಸಂದೇಶ ನಮ್ಮ ನಿತ್ಯ ಬದುಕಿಗೆ ಪ್ರಸ್ತುತ ಎಂದು ಚಳ್ಳಕೆರೆ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ತಿಳಿಸಿದರು.
ತ್ಯಾಗರಾಜನಗರದ ಶ್ರೀದತ್ತ ಮಂದಿರದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಶ್ರೀಮಾತೆ ಶಾರದಾದೇವಿ”ಯವರ 173ನೇ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಆಧುನಿಕ ಬದುಕಿಗೆ ಶ್ರೀಮಾತೆ ಶಾರದಾದೇವಿಯವರ ಜೀವನ-ಸಂದೇಶಗಳ ಪ್ರಸ್ತುತತೆ” ಎಂಬ ವಿಷಯವಾಗಿ ಪ್ರವಚನ ನೀಡಿದರು.
ನಮಗೆ ಮನಃಶಾಂತಿ ಬೇಕಿದ್ದರೆ ಪರದೋಷ ನೋಡಬಾರದು, ನಮ್ಮ ದೋಷಗಳನ್ನು ನಾವೇ ನೋಡಿಕೊಳ್ಳಬೇಕು. ಯಾವಾಗಲೂ ಕಾರ್ಯನಿರತರಾಗಿರ ಬೇಕು,ಇದರಿಂದ ನಮ್ಮ ಮನಸ್ಸಿನಲ್ಲಿ ದೂರಾಲೋಚನೆಗಳು ಸುಳಿಯುವುದಿಲ್ಲ.
ಆದ್ದರಿಂದ ಶಾರದಾಮಾತೆಯವರ ಜೀವನ ಮತ್ತು ಅವರು ನೀಡಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು ಅವುಗಳ ಸಮರ್ಪಕ ಅನುಷ್ಠಾನದಿಂದ ಸಾರ್ಥಕ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಸುಮಾ ಪ್ರಕಾಶ್ ಮತ್ತು ಸಂಗಡಿಗರಿಂದ ಸಾಮೂಹಿಕ ಶ್ರೀಸೌಂದರ್ಯ ಲಹರಿ ಪಾರಾಯಣ, ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರಿಂದ ಶ್ರೀಶಾರದಾ ಗಾನ ಲಹರಿ ಗಾನ-ಪ್ರವಚನ ಕಾರ್ಯಕ್ರಮ, ದಿವ್ಯತ್ರಯರಿಗೆ ಮಂಗಳಾರತಿ ಹಾಗೂ ಅನ್ನಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗದ ನಿರೂಪಣೆ ಯತೀಶ್ ಎಂ ಸಿದ್ದಾಪುರ ಮಾಡಿದರು. ಎಂ ಗೀತಾ ನಾಗರಾಜ್ ಸ್ವಾಗತ ಪರಿಚಯ ಮಾಡಿದರು. ಎಚ್ ಲಕ್ಷ್ಮೀದೇವಮ್ಮ ವಂದಿಸಿದರು.
ಜಯಂತ್ಯುತ್ಸವ ಸತ್ಸಂಗ ಕಾರ್ಯಕ್ರಮದಲ್ಲಿ ಡಾ.ಬಾಲಾಜೀ ವೆಂಕಟೇಶ್, ನಾಗಶಯನ ಗೌತಮ್, ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀನಾಥ್, ಮಂಜುನಾಥ್, ಗೀತಾ ಪ್ರಕಾಶ್,ಜಾನಕಿ, ಶ್ರೀನಿವಾಸ್, ರಂಗಮ್ಮ,ಪಂಕಜ, ಸರಸ್ವತಿ, ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ವೆಂಕಟಲಕ್ಷ್ಮೀ,ಭಾರತಿ,
ಸಂತೋಷ್,ಋತಿಕ್, ಮಾನ್ಯ,ಕವಿತಮ್ಮ, ವೀಣಾ, ರಶ್ಮಿ ಪಂಡಿತಾರಾಧ್ಯ,ಗೀತಾ, ಪ್ರಮೀಳಾ,ಮಂಜುಳಾ, ವಿಶಾಲಾಕ್ಷಿ,ಗಿರಿಜಾ, ಗಂಗಾಂಬಿಕೆ, ಸುಬ್ಬಣ್ಣ, ಅನುಸೂಯ ರಾಘವೇಂದ್ರ,ಕಾವೇರಿ, ಸಂಗೀತ, ರಶ್ಮಿ, ತಿಪ್ಪಮ್ಮ, ಜಯಮ್ಮ, ಲೀಲಾವತಿ, ನಾಗರತ್ನಮ್ಮ, ಶಾರದಾಮ್ಮ, ವೀರಮ್ಮ, ಶಿಲ್ಪ, ಶೋಭಾ ,ರೂಪ ಸೇರಿದಂತೆ 350ಕ್ಕೂ ಹೆಚ್ಚು ಸದ್ಭಕ್ತರು ಪಾಲ್ಗೊಂಡಿದ್ದರು.

