ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರದ ಅಪ್ರಬುದ್ದ ಆಡಳಿತಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಬೆಲೆ ಏರಿಕೆಯಲ್ಲಿ ಕಾಂಗ್ರೆಸ್ ಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ಇದೀಗ ನಾಡಿನ ಮಕ್ಕಳ ಅಕ್ಷರ ದೀವಿಗೆಯನ್ನೂ ಬಿಸಿಯಾಗಿಸಿದೆ! ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈಗಾಗಲೇ ಪಠ್ಯ ಪುಸ್ತಕಗಳ ಬೆಲೆ 100% ಹೆಚ್ಚಾಗಿದ್ದು, ಲಕ್ಷಾಂತರ ಪೋಷಕರು ಆರ್ಥಿಕ ಸಂಕಷ್ಟ ಎದುರಿಸುವ ಹೊತ್ತಿನಲ್ಲಿ ಮತ್ತೆ ಶೇ. 10% ಏರಿಸಲು ಹೊರಟಿರುವ ಶಿಕ್ಷಣ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ಕೂಡಲೇ ಈ ಸರ್ಕಾರ ಪಠ್ಯ ಪುಸ್ತಕಗಳ ದರ ಏರಿಕೆಯನ್ನು ಹಿಂಪಡೆಯಬೇಕು! ನಿಖಿಲ್ ಆಗ್ರಹ ಮಾಡಿದ್ದಾರೆ.