ಜನೋಪಕಾರಿ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ ಎಂದು ನಾಮಕರಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಅಧಿಕೃತವಾಗಿ ಜನೋಪಕಾರಿ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣಎಂದು ಮರುನಾಮಕರಣ ಮಾಡಲಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಇದು ಜನೋಪಕಾರಿ ದೊಡ್ಡಣ್ಣ ಶೆಟ್ಟರ ಸಮಾಜ ಸೇವೆಯನ್ನು ಗೌರವಿಸುವ ಉದ್ದೇಶ ಹೊಂದಿದೆ.

 ದೊಡ್ಡಣ್ಣ ಶೆಟ್ಟರು (1840-1921) ಬೆಂಗಳೂರಿನ ಪ್ರಸಿದ್ಧ ವ್ಯಾಪಾರಿ ಮತ್ತು ಲೋಕೋಪಕಾರಿ. ಅವರು 1906ರಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮ ಸಂಸ್ಥೆ ಸ್ಥಾಪಿಸಿ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ, ವಸತಿ ಮತ್ತು ವಿದ್ಯಾರ್ಥಿ ವೇತನ ನೀಡಿದ್ದರು ಎಂದು ಸಚಿವರು ಸ್ಮರಿಸಿದರು.

- Advertisement - 

ದೊಡ್ಡಣ್ಣ ಶೆಟ್ಟರ 104ನೇ ಆರಾಧನಾ ಮಹೋತ್ಸವದ ಭಾಗವಾಗಿ ಈ ಕಾರ್ಯಕ್ರಮ ನಡೆದಿದ್ದು, ಬಸ್ ನಿಲ್ದಾಣದ ಉದ್ಘಾಟನೆ ಮತ್ತು ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿದೆ.

ನಿಲ್ದಾಣದಲ್ಲಿ 7 ಬಸ್ ಬೇಗಳು, 6 ಪ್ಲಾಟ್‌ಫಾರಂಗಳು, ವಾಣಿಜ್ಯ ಮಳಿಗೆಗಳು, ಕುಡಿಯುವ ನೀರು, ಶೌಚಾಲಯಗಳು ಮತ್ತು ಪಾರ್ಕಿಂಗ್ ಸೌಲಭ್ಯಗಳಿವೆ. ಪ್ರಸ್ತುತ, ಇಲ್ಲಿಂದ 1,176 ಅನುಸೂಚಿಗಳಲ್ಲಿ 3,221 ಸುತ್ತುಗಳು ನಡೆಯುತ್ತಿವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

- Advertisement - 

ಮುಖಂಡ ವಿ.ಆರ್ ಸುದರ್ಶನ್, ಬಿಎಂಟಿಸಿ ಅಧಿಕಾರಿಗಳು, ಸಮುದಾಯದ ಸ್ಥಳೀಯ ನಾಯಕರು ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
error: Content is protected !!
";