ಚಂದ್ರವಳ್ಳಿ ನ್ಯೂಸ್, ದಾವಣಗೆರೆ
ಸುಂದರ ಪ್ರಪಂಚದಲ್ಲಿ
ಸಿಹಿಯಾದ ಸುಳ್ಳಾಡುವ
ಜನರ ನಡುವೆ ಕಹಿಯಾದ
ಸತ್ಯ ಯಾರಿಗೂ ಬೇಕಾಗಿಲ್ಲ….
ಕ್ಷಣಿಕ ಸುಖ ನೀಡುವ ಹಣದ
ಮುಂದೆ ಬಂಧ ಅನುಬಂಧ
ಸಂಬಂಧಗಳು ಯಾರಿಗೂ ಬೇಕಾಗಿಲ್ಲ……
ಕಪಟ ನಾಟಕದ ಬದುಕಿನ
ನಡುವೆ ಸುಂದರ ಜೀವನದ ಆನಂದ ಯಾರಿಗೂ ಬೇಕಾಗಿಲ್ಲ………
ಮನಕೆ ಮುದ ನೀಡುವ
ಜಂಗಮವಾಣಿಯ
ನಡುವೆ ಸಾಹಿತ್ಯ ಸಂಗೀತ
ಯಾರಿಗೂ ಬೇಕಾಗಿಲ್ಲ………
ಬಡಿದು ತಿನ್ನುವ ನೂರಾರು
ಜನರ ನಡುವೆ ದುಡಿದು
ತಿನ್ನುವ ನಿಯತ್ತಿನ ಜನರು
ಯಾರಿಗೂ ಬೇಕಾಗಿಲ್ಲ…..
ಪೇಟೆ ಬದುಕಿಗೆ ಪೆಂಡಾಲ್
ಹಾಕುವ ಜನರ ನಡುವೆ
ಪೇಚಾಡಿ ಕೆಲಸ ಮಾಡುವ
ಹೊಲ ಗದ್ದೆಗಳು ಯಾರಿಗೂ ಬೇಕಾಗಿಲ್ಲ…………….
ಅವಗುಣಗಳ ತುಂಬಿದ
ಮನುಜರ ನಡುವೆ,
ಗುಣದಲ್ಲಿ ಮೇಲಾದ ದನ
ಕರುಗಳು ಯಾರಿಗೂ ಬೇಕಾಗಿಲ್ಲ………
ಪ್ಯಾಶನ್ ಬದುಕಿನ
ವ್ಯಮೋಹದ ನಡುವೆ
ಸಿಂಗಾರದ ಆಭರಣಗಳು
ಯಾರಿಗೂ ಬೇಕಾಗಿಲ್ಲ……
ಬರೀ ಮಾತು ತುಂಬಿದ ಜನರ
ಸಂತೆಯೊಳಗೆ ಮಾನವೀಯತೆ
ಯಾರಿಗೂ ಬೇಕಾಗಿಲ್ಲ……
ಡಂಬಚಾರದ ಭಕ್ತಿಯ ನಡುವೆ
ಪೂಜೆ ಪುನಸ್ಕಾರಗಳು ಯಾರಿಗೂ ಬೇಕಾಗಿಲ್ಲ…….
ತೊರ್ಪಡಿಕೆಯ ಆಡಂಬರದ
ಪೂಜೆಗಳ ನಡುವೆ ನಿಜ
ದೇವರು ಯಾರಿಗೂ ಬೇಕಾಗಿಲ್ಲ.
ಏಕಾಂತ ಬಯಕೆಯ ನೆಪದಲ್ಲಿ
ಕೂಡು ಕುಟುಂಬದ ಬದುಕು
ಯಾರಿಗೂ ಬೇಕಾಗಿಲ್ಲ………
ಹೆತ್ತು ಹೊತ್ತು ಸಾಕಿ ಬೆಳಸಿದ
ಮಕ್ಕಳ ನಡುವೆ ಹಿರಿಯ
ಜೀವಗಳು ಯಾರಿಗೂ
ಬೇಕಾಗಿಲ್ಲ………….
ಕವಿತೆ:ಡಾ. ಉಬಾಮ

