ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರಕ್ಕೇರಲು ಅವಾಸ್ತವಿಕ ಗ್ಯಾರಂಟಿಗಳನ್ನು ಘೋಷಿಸಿದ್ದ ಕರ್ನಾಟಕ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದೆ ಗ್ಯಾರಂಟಿಗಳನ್ನು ಬಂದ್ ಮಾಡಿದೆ ಬಿಜೆಪಿ ಆರೋಪಿಸಿದೆ.
ಯಾವುದೇ ಒಂದು ಯೋಜನೆ ನಿರಂತರ ಮೂರು ತಿಂಗಳುಗಳ ಕಾಲ ಸ್ಥಗಿತಗೊಂಡರೆ ಆ ಯೋಜನೆಗೆ ಬೀಗ ಹಾಕಿದಂತೆಯೇ. ಕಾಂಗ್ರೆಸ್ ಗ್ಯಾರಂಟಿಗಳೂ ಇದೇ ಹಾದಿ ಅನುಸರಿಸುತ್ತಿವೆ ಎಂದು ಬಿಜೆಪಿ ದೂರಿದೆ.
ಸರ್ಕಾರದ ಬೊಕ್ಕಸ ಖಾಲಿ ಆದ ಕಾರಣ ಯಾವ ಗ್ಯಾರಂಟಿಗಳನ್ನೂ ಈಡೇರಿಸಲು ಸಿದ್ದರಾಮಯ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ಯಾರಂಟಿಗಳ ಬಾಗಿಲು ಬಂದ್ ಆಗುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.
ಉಪ ಚುನಾವಣೆ ನಡೆಯುವಾಗ ಒಮ್ಮೆಲೇ ಜೀವಂತವಾಗಿದ್ದ ಗ್ಯಾರಂಟಿಗಳು ಮತ್ತೆ ಸತ್ತು ಮಲಗಿವೆ. ಮುಂದೆ ತಾಲ್ಲೂಕು, ಜಿಲ್ಲಾ ಪಂಚಾಯತ್, ಬಿಬಿಎಂಪಿ ಚುನಾವಣೆ ನಡೆಯುವಾಗ ಮತ್ತೆ ಜೀವಂತವಾಗುವ ಲಕ್ಷಣಗಳಿವೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೋಸ್ಕರ ಇರುವುದೋ ಅಥವಾ ಕೆಪಿಸಿಸಿಗೆ ಚುನಾವಣೆ ಗೆಲ್ಲುವುದಕ್ಕೋಸ್ಕರ ಇರುವುದೋ? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.