ರಾಹುಲ್‌ ಗಾಂಧಿ ಅವರ ಹುಟ್ಟುಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿರವರ ಹುಟ್ಟುಹಬ್ಬದ ಅಂಗವಾಗಿ ಜಾನುಕೊಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳಿಗೆ ನೋಟ್‌ಬುಕ್
, ಪೆನ್ ಹಾಗೂ ಸಿಹಿ ವಿತರಿಸಲಾಯಿತು.

- Advertisement - 

ಮಕ್ಕಳಿಗೆ ನೋಟ್‌ಬುಕ್‌ಗಳನ್ನು ವಿತರಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರಹಳ್ಳಿ ಉಲ್ಲಾಸ್ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರುರವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ. ಹಾಗಾಗಿ ಅವರ ಮೊಮ್ಮಗ ರಾಹುಲ್‌ಗಾಂಧಿರವರ ಹುಟ್ಟುಹಬ್ಬವನ್ನು ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮೂಲಕ ಆಚರಿಸುತ್ತಿರುವುದು ನಮಗೆ ಖುಸಿ ಕೊಟ್ಟಿದೆ ಎಂದು ಹೇಳಿದರು.

- Advertisement - 

ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಕಾಸ್, ನಗರಾಧ್ಯಕ್ಷ ಪವನ್, ಗ್ರಾಮಾಂತರ ಅಧ್ಯಕ್ಷ ಮಹಾಂತೇಶ್, ಉಪಾಧ್ಯಕ್ಷ ಸುನಿಲ್, ಎಸ್.ಡಿ.ಎಂ.ಸಿ. ಅಧ್ಯಕ್ಷ

ನಾಗೇಶ್, ಶಶಿಕುಮಾರ್, ಬಾಲಣ್ಣ, ಸುರೇಶ್, ಶಿವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನ್ನಪೂರ್ಣಮ್ಮ ಹಾಗೂ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement - 

 

Share This Article
error: Content is protected !!
";