ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಸಂಘಗಳ ನೊಂದಣಿ ಇಲಾಖೆಯಲ್ಲಿ ನೊಂದಾಯಿತವಾಗಿ, ಚಿತ್ರದುರ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದ 18 ರಿಂದ 35 ವರ್ಷದೊಳಗಿನ ಯುವಕ, ಯುವತಿ ಸಂಘಗಳಿಗೆ ಕೇಂದ್ರ ಕಚೇರಿಯಿಂದ ಕ್ರೀಡಾ ಸಾಮಾಗ್ರಿಗಳನ್ನು ನೀಡಲಾಗುವುದು.
ಆದುದರಿಂದ ಮಾನ್ಯತೆ ಪಡೆದಿರುವ ಸಂಘಗಳ ಬೈಲಾ ಪ್ರತಿ, ನೊಂದಣಿ ಪತ್ರ, ಮಾನ್ಯತಾ ಪತ್ರಗಳನ್ನು ಇದೇ ಅ.19ರೊಳಗೆ ಕಚೇರಿಗೆ ಸಲ್ಲಿಸಲು ತಿಳಿಸಿದೆ. ಮೊದಲು ಬಂದ ಸಂಘಗಳ (ತಾಲ್ಲೂಕಿಗೆ ಎರಡರಂತೆ) ಹೆಸರುಗಳನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-235635 ಗೆ ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ಎಂ ನೆಲವಗಿ ತಿಳಿಸಿದ್ದಾರೆ.