ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 20ನೇ ವಾರ್ಷಿಕ ಘಟಿಕೋತ್ಸವವನ್ನು 2025ನೇ ಮಾರ್ಚ್ ಮಾಹೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 2020-21ನೇ ಶೈಕ್ಷಣಿಕ ಸಾಲಿನಿಂದ 2023-24ನೇ ಶೈಕ್ಷಣಿಕ ಸಾಲಿನ ವರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿವಿಧ ಕೋರ್ಸುಗಳಲ್ಲಿ ತೇರ್ಗಡೆ ಹೊಂದಿರುವ ಸಿ.ಬಿ.ಸಿ.ಎಸ್ / ನಾನ್ ಸಿ.ಬಿ.ಸಿ.ಎಸ್ ಗಳ ಯು.ಜಿ / ಪಿ.ಜಿ/ ಡಿಪ್ಲೋಮಾ / ಸರ್ಟಿಫಿಕೇಟ್ ಕೋರ್ಸ್ಗಳ ವಿದ್ಯಾರ್ಥಿಗಳು ಘಟಿಕೋತ್ಸವದ ಶುಲ್ಕವನ್ನು ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಪದಕ ಮತ್ತು ನಗದು ಬಹುಮಾನ ಪುರಸ್ಕೃತರು, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಪಿ.ಹೆಚ್.ಡಿ ವಿದ್ಯಾರ್ಥಿಗಳು (ಉಪಸ್ಥಿತರು) ರೂ. 1,200 ಎಲ್ಲಾ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಪಿ.ಹೆಚ್.ಡಿ ವಿದ್ಯಾರ್ಥಿಗಳು (ಅನುಪಸ್ಥಿತರು) ರೂ 1,500 ಗಳನ್ನು ದಂಡ ಶುಲ್ಕವಿಲ್ಲದೆ ಫೆಬ್ರವರಿ 10ರ ಒಳಗಾಗಿ ಹಾಗೂ ರೂ 100 ದಂಡ ಶುಲ್ಕದೊಂದಿಗೆ ಫೆಬ್ರವರಿ 15ರ ಒಳಗಾಗಿ ಪಾವತಿಸುವುದು.
ಹೆಚ್ಚಿನ ವಿವರಗಳಿಗೆ, ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ –01, ಮೊದಲನೇ ಮಹಡಿ, ಸ್ಯಾಟಿಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬೆಂಗಳೂರು – 560 026 ಅಥವಾ ಕಚೇರಿ ದೂರವಾಣಿ ಸಂ. 080-26603664 ಹಾಗೂ 9844965515 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.