ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕಾಗಿ ಮಾದಿಗರು 30 ವರ್ಷಗಳಿಂದ ಹೋರಾಟ ಮಾಡಿ ಶಾಂತಿಯುತವಾಗಿ ಯಾರಿಗೂ ತೊಂದರೆಯಾಗದಂತೆ ನಡೆಸಿಕೊಂಡು ಬಂದಿರುವುದರ ಪ್ರತಿಫಲವಾಗಿ ೨೦೨೪ ಆಗಸ್ಟ್ ೦೧ ರಂದು ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟರ ಒಳಮೀಸಲಾತಿ ವರ್ಗೀಕರಣ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಐತಿಹಾಸಿಕ ತೀರ್ಪು ನೀಡಿದ್ದು, ಒಳಮೀಸಲಾತಿ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಕರ್ನಾಟಕ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ನಿವೃತ್ತ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಹೊಸ ಆಯೋಗ ರಚನೆ ಮಾಡಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಎಸ್.ಸಿ, ಎಸ್.ಟಿ, ಓಬಿಸಿ ವರ್ಗಗಳ ಜನರ ಧ್ವನಿಯಾಗಿ
ಈ ಸಂವಾದ ಕಾರ್ಯಕ್ರಮ ವಿವಿಧ ಚಿಂತನ ಶೀಲ ಸಮುದಾಯಗಳು ಮಾದಿಗ ಮಹಾಸಭಾ, ಲಂಕೇಶ್ ವಿಚಾರ ವೇದಿಕೆ, ಬೀಕೆ ಮತ್ತು ಕೇಬಿ ಬಳಗ ಒಗ್ಗೂಡಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಚಾರ ಸಂಗ್ರಹಿಸಲು ಸಂಘಟಕರು ಕೋರಿದ್ದಾರೆ.
ವಿಷಯ ಮಂಡನೆ:
ಬೆಂಗಳೂರಿನ ಸಾಮಾಜಿಕ-ರಾಜಕೀಯ ಚಿಂತಕ ಶಿವಸುಂದರ್, ಚಿತ್ರದುರ್ಗದ ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ, ಹಿರಿಯೂರಿನ ಸಾಮಾಜಿಕ-ರಾಜಕೀಯ ವಿಶ್ಲೇಷಕ ಕೋಡಿಹಳ್ಳಿ ಸಂತೋಷ್, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು,
ಹಿರಿಯ ಪತ್ರಕರ್ತರು, ಮಾಧ್ಯಮ ಆಕಾಡೆಮಿ ಸದಸ್ಯ ಎಂ.ಎಸ್.ಅಹೋಬಳಪತಿ, ಒಳಮೀಸಲಾತಿ ಹೋರಾಟಗಾರ ರಾಜಕೀಯ ಚಿಂತಕ ಬಿ.ಪಿ.ಪ್ರಕಾಶ್ ಮೂರ್ತಿ, ಒಳಮೀಸಲಾತಿ ಹೋರಾಟಗಾರ ಹುಲ್ಲೂರು ಕುಮಾರಸ್ವಾಮಿ,
ಪರ್ತಕರ್ತರು, ಲಂಕೇಶ್ ವಿಚಾರ ವೇದಿಕೆಯ ಸಂಚಾಲಕ ಜಡೇಕುಂಟೇ ಮಂಜುನಾಥ್, ಸಾಮಾಜಿಕ-ರಾಜಕೀಯ ವಿಶ್ಲೇಷಕ ವೈ.ರಾಜಣ್ಣ ತುರುವನೂರು, ಸಾಮಾಜಿಕ-ರಾಜಕೀಯ ಹಕ್ಕುಗಳ ಹೋರಾಟಗಾರ ಕೊಟ್ಟ ಶಂಕರ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸದಸ್ಯ ಪ್ರೊ.ಮಲ್ಲಿಕಾರ್ಜುನ್.ಆರ್.ಹಲಸಂಗಿ,
ದಾವಣಗೆರೆ ಜಿಲ್ಲಾ ಒಳಮೀಸಲು ಐಕ್ಯ ಹೋರಾಟದ ಸಮನ್ವಯಕಾರ ಬಿ.ಎಂ.ನಿರಂಜನ್, ಒಳಮೀಸಲಾತಿ ಹೋರಾಟಗಾರ ಎಂ.ಆರ್.ಶಿವರಾಜ್ ಮತ್ತಿತರರು ಪಾಲ್ಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.