ಮಕ್ಕಳ ಕಾಣೆ ಪ್ರಕರಣದಲ್ಲಿ ಬಾಲ್ಯ ವಿವಾಹ, ಪ್ರತ್ಯೇಕ ಎಫ್ಐಆರ್ ದಾಖಲಿಸಿ- ನ್ಯಾ. ವಿಜಯ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳ ಕಾಣೆ ಪ್ರಕರಣದ ತನಿಖೆ ವೇಳೆ ಬಾಲ್ಯ ವಿವಾಹ ನಡೆದಿರುವುದ ಪತ್ತೆಯಾದರೆ, ಪ್ರತ್ಯೇಕವಾಗಿ ಬಾಲ್ಯ ವಿವಾಹ ಪ್ರಕರಣ ಎಫ್..ಆರ್. ದಾಖಲಿಸಿ ತನಿಖೆ ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್ ಸೂಚನೆ ನೀಡಿದರು.

ನಗರದ ಬಾಲ ಭವನ ಸಭಾಂಗಣದಲ್ಲಿ ಶುಕ್ರವಾರ ಕಾಣೆಯಾದ ಮಕ್ಕಳ ಪತ್ತೆ ಕುರಿತು ಪೋಷಕರು ಹಾಗೂ ತನಿಖಾ ಪೊಲೀಸ್ ಅಧಿಕಾರಿಗಳ ಸಭೆ ಜರುಗಿಸಿ ಅವರು ಮಾತನಾಡಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಕಾಣೆಯಾದ ಮಕ್ಕಳ ಪತ್ತೆ ಕಾರ್ಯವನ್ನು ತನಿಖಾಧಿಕಾರಿಗಳು ಚುರುಕುಗೊಳಿಸಬೇಕು. ಹಳೆಯ ಪ್ರಕರಣಗಳನ್ನು ಮುಂದಿನ ತಿಂಗಳ ಸಭೆಯೊಳಗೆ ಕಡ್ಡಾಯವಾಗಿ ಪತ್ತೆ ಹಚ್ಚಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸುವಂತೆ ನ್ಯಾ.ಎಂ.ವಿಜಯ್ ಹೇಳಿದರು.

       2021 ರಿಂದ 2024 ವರೆಗೆ ಜಿಲ್ಲೆಯಲ್ಲಿ 375 ಮಕ್ಕಳ ಕಾಣೆ ಪ್ರಕರಣಗಳು .ಪಿ.ಸಿ ಕಲಂ 363 ಅಡಿಯಲ್ಲಿ ದಾಖಲಾಗಿವೆ. ಇವುಗಳ ಪೈಕಿ 370 ಪಕ್ರರಣಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. 5 ಪ್ರಕರಣಗಳು ಬಾಕಿ ಇವೆ.

ಇದೇ ಅವಧಿಯಲ್ಲಿ ಪೋಷಕರೊಂದಿಗೆ ಕಾಣೆಯದ 131 ಮಕ್ಕಳ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 129 ಪಕ್ರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ 2 ಪ್ರಕರಣಗಳು ಬಾಕಿ ಇವೆ ಎಂದು ಸಂಬA ಪಟ್ಟ ತನಿಖಾ ಪೊಲೀಸರು ನ್ಯಾಯಾಧೀಶರಿಗೆ ವರದಿ ನೀಡಿದರು.

      ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಸವಿತಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಅಂಜಿನಪ್ಪ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಬಸವರಾಜ್, ಗುರುಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

- Advertisement -  - Advertisement - 
Share This Article
error: Content is protected !!
";