ಡಿ ಕೆ ಶಿವಕುಮಾರ್ ಅವರ ಬೆನ್ನಿಗೆ ನಿಂತ ಒಕ್ಕಲಿಗರ ಸಂಘದ ಪದಾಧಿಕಾರಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಒಕ್ಕಲಿಗರ ಸಂಘದ ಆಡಳಿತಕ್ಕೆ ನೂತನವಾಗಿ ನೇಮಕವಾದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಕೆಂಚಪ್ಪಗೌಡರು. ದಂತ ವೈದ್ಯಕೀಯ ಶಿಕ್ಷಣ ಹಾಗೂ ಆಸ್ಪತ್ರೆ ಅಧ್ಯಕ್ಷ ಜೆ ರಾಜು ಬೇತೂರು ಪಾಳ್ಯ ಸೇರಿದಂತೆ ಇನ್ನು ಕೆಲವು ಆಡಳಿತಾತ್ಮಕ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಇಂದು ಬೆಳಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು.

 ಈ ವೇಳೆಯಲ್ಲಿ ಒಕ್ಕಲಿಗರ ಸಂಘದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಚರ್ಚೆಗಳು ಮುನ್ನೆಲೆಗೆ ಬಂದಿವೆ.  ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ  ನಿಮ್ಮ ಆಯ್ಕೆ ವಿಚಾರದಲ್ಲಿ ರಾಜ್ಯದ ಸಮಗ್ರ ಒಕ್ಕಲಿಗ ಜನತೆ ನಿಮ್ಮೊಂದಿಗೆ ನಿಲ್ಲುತ್ತವೆ ಎಂದು ಹುಮ್ಮಸ್ಸು ತುಂಬಿದ ಒಕ್ಕಲಿಗರ ಸಂಘ ರಾಜ್ಯದಲ್ಲಿ ಮುಂದೆ ಬರುವಂತಹ ಸ್ಥಳೀಯ ಸಂಸ್ಥೆಯ ಆಡಳಿತವಾದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ  ಒಕ್ಕಲಿಗರ ಪ್ರಾಬಲ್ಯ ರಾಜಕೀಯವಾಗಿ ಬೆಳೆಸಲು ಡಿ ಕೆ ಶಿವಕುಮಾರ್ ಅವರಿಗೆ ಮನವಿಯನ್ನು ಒಕ್ಕಲಿಗರ ಸಂಘದ ನಿಯೋಗ ಅರ್ಪಿಸಿದ ವಿಚಾರ ತಿಳಿದುಬಂದಿದೆ.

 

 

- Advertisement -  - Advertisement - 
Share This Article
error: Content is protected !!
";