ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್. ಎನ್.ಟಿ. ರವರು ಬೆಳ್ಳಗಟ್ಟೆ ಗ್ರಾಮ ಪಂಚಾಯತಿ ಕಾರ್ಯಾಲಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ
ಸ್ವಚ್ಛತೆಯೇ ಸೇವೆ ಎಂಬ ಅಭಿಯಾನದ ಅಡಿಯಲ್ಲಿ ಸ್ವಚ್ಛೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಸ್ವಚ್ಛೋತ್ಸವ ಕಾರ್ಯಕ್ರಮ ಅಂಗವಾಗಿ ನಾವು ಎಲ್ಲರೂ ಈ ದಿನ ಸ್ವಾತಂತ್ರ್ಯ ಹೋರಾಟಗಾರರ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸ್ಸು ನನಸಾಗಲಿ ಎಂಬ ಆಶಯದಂತೆ ನಮ್ಮ ಮನಸ್ಸು ಶುದ್ದಿ ಇರುವಂತೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ನಾವು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು.
ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಂಚಾಯಿತಿಗೆ ಸಂಬಂಧಪಟ್ಟ ಎಲ್ಲಾ ಗ್ರಾಮಗಳನ್ನು ಸ್ವಚ್ಛವಾಗಿರುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಮತ್ತು ಆ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಮ್ಮ ತಾಲೂಕಿನಲ್ಲಿ ಹೆಚ್ಚು ಹೆಚ್ಚು ಹಮ್ಮಿಕೊಳ್ಳುವ ಮೂಲಕ ಆರೋಗ್ಯದ ಮೂಲ ಆಶಯವನ್ನು ಉಳಿಸುವಂತಹ ಕೆಲಸವನ್ನು ನಾವು ಎಲ್ಲರೂ ಒಗ್ಗಟ್ಟಿನಿಂದ ಒಟ್ಟಾಗಿ ಮಾಡೋಣ ಎಂದರು.
ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ-
ತಾಲೂಕಿನ ಇಒ ನರಸಪ್ಪ, ಸರ್ಕಾರಿ ತಾಲೂಕು ನೌಕರಿ ಸಂಘದ ಅಧ್ಯಕ್ಷ ಎಸ್. ವೆಂಕಟೇಶ, ತಾಂತ್ರಿಕ ಸಂಶೋಜಕ ಬಿ. ಮಹೇಶ, ಪಿಡಿಒ ಹನುಮಂತಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪವನ್ ಕುಮಾರ್, ಗ್ರಾಪಂ. ಅಧ್ಯಕ್ಷ ಸಣ್ಣ ಓಬಮ್ಮ ಓಬಯ್ಯ, ಉಪಾಧ್ಯಕ್ಷ ಬಸಣ್ಷ, ಗ್ರಾಪಂ. ಸದಸ್ಯರಾದ ಮಹೇಶ, ಲತಾ ಲೋಕೇಶ, ಕವಿತಾ ತಿಪ್ಪೇಶ, ಬೋರಯ್ಯ, ಭೀಮಕ್ಕ, ನಾಗರಾಜ, ಇಂದ್ರಮ್ಮ ಮಲಿಯಪ್ಪ, ಜಯಣ್ಣ, ಓಬಮ್ಮ, ರೇಣುಕಾ ಶಿವು, ನೀಲಮ್ಮ ಟೈಲರ್ ಪಾಲಯ್ಯ, ದೊಡ್ಡ ಬೋರಯ್ಯ,
ಲಕ್ಷ್ಮೀ ಚೆನ್ನಕೇಶವ, ರಾಧಮ್ಮ ರಾಖೇಶ್, ಶರಣಪ್ಪ, ಶ್ವೇತಾ, ಹನುಮೇಶ, ತಾಲೂಕಿನ ಆಶಾಕಾರ್ಯಾ ಕರ್ತರು, ಸ್ವ ಸಹಾಯ ಸಂಘದ ಗುಂಪಿನ ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಹಾಗೂ ಪ್ರಮುಖ ಮುಖಂಡರು, ನಾಗರೀಕರು, ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು ಎಂದು ಸಿ ಅರುಣ್ ಕುಮಾರ್ ತಿಳಿಸಿದ್ದಾರೆ.

