ರೈತರ ಪರ ನಿಲುವು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದಲ್ಲಿ ಲಕ್ಷಾಂತರ ಜನರು ಸರ್ಕಾರಿ ಜಗಗಳಲ್ಲಿ
  ಮನೆ ಗುಡಿಸಲು  ಕಟ್ಟಿಕೊಂಡಿದ್ದು ಅಂತಹ ಜನತೆಗೆ ಸರ್ಕಾರದಿಂದ ಯಾವುದೇ ಹಕ್ಕು ಪತ್ರಗಳಾಗಲಿ ಮಂಜೂರಾತಿ ಆಗಲಿ ನೀಡಿರುವುದಿಲ್ಲ ಅಂತಹ ಜನರ ಬೆಂಬಲವಾಗಿ ದೊರೆಸ್ವಾಮಿ ಅವರ ಆಶಯದಂತೆ ನಿರಂತರವಾಗಿ ನಮ್ಮ ಸಮಿತಿ ಹೋರಾಟ ನಡೆಸುತ್ತಿದೆ ಎಂದು ರಾಜ್ಯ ಸಮಿತಿ ಮುಖಂಡ ಸಿರಿಮನೆ ನಾಗರಾಜು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದರು,

ತಾಲ್ಲೂಕಿನಲ್ಲಿ ಪಾರಂಪರಿಕವಾಗಿ ಬೇಸಾಯದಲ್ಲಿ ತೊಡಗಿಕೊಂಡು ಭೂಮಿಯನ್ನು ನಂಬಿ ಸರ್ಕಾರಿ ಗೋಮಾಳ ಸೇರಿದಂತೆ ಇತರೆ ಸ್ಥಳಗಳಲ್ಲಿ ಜೀವನ ಸಾಗಿಸುತ್ತಿರುವ ಬಡರೈತರ ಭೂಮಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು  ಕಾನೂನಿನ ಹೆಸರಿನಲ್ಲಿ  ಕಬಳಿಸಲು ಮುಂದಾಗಿದ್ದಾರೆ.

ಈ ಕುರಿತು ನಿರಂತರವಾಗಿ ಹೋರಾಟ ನಡೆಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ , ಜಿಲ್ಲಾಧಿಕಾರಿಗಳು ಈ ಸಮಸ್ಯೆ ಕುರಿತು ಸೂಕ್ತ ಕ್ರಮ ಕೈಗೊಂಡು ರೈತರು ಉತ್ತಮ ಜೀವನ ಸಾಗಿಸಲು ಸಹಕರಿಸಬೇಕಿದೆ. ಇಲ್ಲವಾದಲ್ಲಿ ರೈತರು  ರಸ್ತೆಗಳಿದ್ದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

 ಈ ಕುರಿತಂತೆ ಸ್ಥಳೀಯ ರೈತರು ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಸಮಿತಿಯ ಗಮನಕ್ಕೆ ತಂದಿದ್ದು  ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಪಕ್ಷದಲ್ಲಿ  ಮುಂದೆ ರಾಜ್ಯಾದ್ಯಂತ  ಉಗ್ರ ಹೋರಾಟ ರೂಪಿಸಲಾಗುವುದು ಎಂದರು. 

 ರಮೇಶ್ ಸಂಕ್ರಾಂತಿ  ಮಾತನಾಡಿ ನಮ್ಮ ತಾಲ್ಲೂಕಿನ ಬಡ ರೈತರ ಸಮಸ್ಯೆಗಳನ್ನು ಕುರಿತು ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ  ಸಾಕಷ್ಟು ಮನವಿ ನೀಡಿದ್ದೇವೆ,

ಆದರೆ ಇದುವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಬಡ ರೈತರ ಭೂಮಿಗಳನ್ನು ಕಾನೂನಿನ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು  ವಶಪಡಿಸಿಕೊಳ್ಳುತ್ತಿದ್ದು  ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ , ರೈತರ ಒಕ್ಕಲಿಬ್ಬಿಸಿ  ಅರಣ್ಯ ಪ್ರದೇಶ ಎಂದು ಬಾವುಟ ನೆಡುತ್ತಿರುವ  ಅರಣ್ಯ ಅಧಿಕಾರಿಗಳಿಗೆ  ರಾಜ್ಯ ಸರ್ಕಾರ ಸೂಕ್ತ ಮಾರ್ಗದರ್ಶನ ನೀಡಬೇಕಿದೆ . ಇದು ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದರು.

 ಸುದ್ದಿಗೋಷ್ಠಿಯಲ್ಲಿ  ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು, ತಾಲೂಕಿನ ರೈತರು ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";