ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಒಕ್ಕಲಿಗ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ರಾಜಕೀಯ ಮುಖಂಡ ಸತೀಶ್ ಗೌಡರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖಂಡ ಸತೀಶ್ ಗೌಡ ಮಹಿಳೆ ಘಟಕದವರಿಗೆ ಶುಭಾಶಯ ತಿಳಿಸಿದರು.
ಒಕ್ಕಲಿಗ ಮಹಿಳೆ ಘಟಕದ ಅಧ್ಯಕ್ಷೆ ಮಮತಾ ಕೃಷ್ಣಮೂರ್ತಿ, ಕಲಾವತಿ ಜಯಣ್ಣ, ಆಲೂರು ಗೀತಾ, ಸುಮಾ, ಛಾಯಾ, ಕುಸುಮ ಪ್ರಸಾದ್, ಬೃಂದಾ, ಜ್ಞಾನದೇವಿ, ಅರುಣಾ, ಮಹಿಳೆ ಘಟಕದವರು ಸೇರಿದಂತೆ ನಗರಸಭೆ ಮಾಜಿ ಅಧ್ಯಕ್ಷ ಅಜಯ್ ಕುಮಾರ್ (ಅಜ್ಜಪ್ಪ), ಅರುಣ್, ದಿವಾಕರ್, ಒಕ್ಕಲಿಗ ಸಂಘದ ಯುವ ಘಟಕ ಅಧ್ಯಕ್ಷ ಆರ್.ಗೌಡ, ರಾಜೇಂದ್ರ, ಚೇತನ್, ಮನೋಜ್ ಉಪಸ್ಥಿತಿ ಇದ್ದರು.

