ನವೆಂಬರ್-16ರಂದು ಸಹಕಾರ ಸಪ್ತಾಹ- ಜಗದೀಶ್ ಕಂದಿಕೆರೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ನಗರದ ಎಪಿಎಂಸಿ ಆವರಣದಲ್ಲಿ ನವೆಂಬರ್ 16ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಲಿದೆ ಎಂದು  ಶ್ರೀ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ಕಂದಿಕೆರೆ ತಿಳಿಸಿದರು.

ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ತಾಲ್ಲೂಕಿನಲ್ಲಿ 120 ಸಹಕಾರ ಸಂಘಗಳಿವೆ. ಇದರಲ್ಲಿ 64 ಹಾಲು ಉತ್ಪಾದಕರ ಸಹಕಾರ ಸಂಘಗಳು, 33 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, 1 ಪಿಎಲ್.ಡಿ ಬ್ಯಾಂಕ್, 1 ಟಿಎಪಿಸಿಎಂಎಸ್ ಬ್ಯಾಂಕ್ ಹಾಗೂ ಉಳಿದ 21  ಕ್ರೆಡಿಟ್  ಸೈಸೋಟಿಗಳು  ಒಳಗೊಂಡಿವೆ.

- Advertisement - 

 ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ಕಂದಿಕೆರೆ ಅಧ್ಯಕ್ಷತೆ ವಹಿಸುವರು. 

ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಅಧ್ಯಕ್ಷರಾದ ಹೆಚ್.ಎನ್ ತಿಪ್ಪೇಸ್ವಾಮಿ ಅವರು ಹಿರಿಯ ಸಹಕಾರಿಗಳಿಗೆ ಸನ್ಮಾನಿಸುವರು. ಯೂನಿಯನ್ ನಿಯಮಿತ ನಿರ್ದೇಶಕ ಈರಲೀಂಗೌಡ ಅವರು ಉತ್ತಮ ಸಹಕಾರ ಸಂಘಗಳಿಗೆ ಹಾಗೂ ನಿವೃತ್ತ ನೌಕರರು ಸಹಕಾರಿಗಳಿಗೆ  ಮಂಜುನಾಥ್ ಮಾಳಿಗೆ ಸನ್ಮಾನಿಸಲಿದ್ದಾರೆ. 

- Advertisement - 

ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಜೆ. ಹನುಮಂತರಾಯ, ಶಿಮುಲ್ ಹಾಗೂ ಯೂನಿಯನ್ ನಿರ್ದೇಶಕ ಬಿಸಿ ಸಂಜೀವಮೂರ್ತಿ ಸೇರಿದಂತೆ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಆಡಳಿತ ಮಂಡಳಿಯ ಸದಸ್ಯರು, ನೌಕರರು, ಹಿರಿಯ ಹಾಗೂ ನಿವೃತ್ತ ಸಹಕಾರಿಗಳು ಮತ್ತು ಸಹಕಾರ ಸಂಘಗಳ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಜೊತೆಗೆ ತಾಲೂಕು ಸಹಕಾರಿ ಸಂಘಗಳ ಯುನಿಯನ್ ರಚಿಸುವ ಮತ್ತು ಸಂಘಟಿಸುವ ಉದ್ದೇಶದಿಂದ ಸದರಿ ಕಾರ್ಯಕ್ರಮಕ್ಕೆ ತಪ್ಪದೇ ಭಾಗವಹಿಸಬೇಕು ಎಂದು ಜಗದೀಶ್ ಕಂದಿಕೆರೆ ತಿಳಿಸಿದ್ದಾರೆ.

 

 

 

Share This Article
error: Content is protected !!
";