ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಧರ್ಮಪುರ ಹೋಬಳಿ, ಹರಿಯಬ್ಬೆ, ಹರಿಯಬ್ಬೆಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಭೂತರಾಯಸ್ವಾಮಿ ನೂತನ ದೇವಸ್ಥಾನದ ಪ್ರಾರಂಭೋತ್ಸವ ಮತ್ತು ನೂತನ ಗೋಪುರ ಕಳಸ ಪ್ರತಿಷ್ಠಾನಯನ್ನು ಏಪ್ರಿಲ್-10 ರಂದು ಗುರುವಾರ ಹಮ್ಮಿಕೊಳ್ಳಲಾಗಿದೆ.
ಶ್ರೀ ಭೂತರಾಯಸ್ವಾಮಿ ನೂತನ ದೇವಸ್ಥಾನ ಮತ್ತು ಗೋಪುರ ಕಳಸ ಪ್ರತಿಷ್ಠಾನ ಮಹೋತ್ಸವ ಕಾರ್ಯಕ್ರಮಕ್ಕೆ ಮಾಯಸಂದ್ರ ಶ್ರೀ ಕರಿಯಮ್ಮದೇವಿ, ಹರಿಯಬ್ಬೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ ಮತ್ತು ಶ್ರೀ ಮಾರಮ್ಮದೇವಿ, ಶ್ರೀ ರಾಮಾಂಜನೇಯಸ್ವಾಮಿ ದೇವರು ಹಾಗೂ ಹರಿಯಬ್ಬೆಪಾಳ್ಯ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವರುಗಳು ಆಗಮಿಸಲಿವೆ.
ಏಪ್ರಿಲ್-10 ರಂದು ಗುರುವಾರ ಬೆಳಿಗ್ಗೆ 7 ಗಂಟೆಗೆ ಗಂಗಾ ಪೂಜೆ ಮತ್ತು ಬೆಳಿಗ್ಗೆ 10 ಗಂಟೆಯಿಂದ ನೂತನ ದೇವಸ್ಥಾನದ ಗೋಪುರ ಕಳಶ ಸ್ಥಾಪನೆ, ಮಧ್ಯಾಹ್ನ 12ಕ್ಕೆ ಆರತಿ ಹಾಗೂ “ಅನ್ನಸಂತರ್ಪಣೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ.11ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ “ಆರತಿ ಬೇಟೆ” ಕಾರ್ಯಕ್ರಮ ಇರುತ್ತದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಭೂತರಾಯಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪಕರು, ಹರಿಯಬ್ಬೆಪಾಳ್ಯ, ಹರಿಯಬ್ಬೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.