ಏಪ್ರಿಲ್-30 ರಂದು ಶ್ರೀಭೂತೇಶ್ವರ ಸ್ವಾಮಿಯ ಗೋಪುರದ ಕಳಸ ಪ್ರತಿಷ್ಠಾಪನೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಗಳಿಕಟ್ಟೆ ಗ್ರಾಮದಲ್ಲಿ ನೆಲಸಿರುವ ಶ್ರೀ ಭೂತೇಶ್ವರ ಸ್ವಾಮಿಯ ದೇವಾಲಯದ  ಗೋಪುರದ ಕಳಸ ಪ್ರತಿಷ್ಠಾಪನೆ ಮಹೋತ್ಸವವು ಏಪ್ರಿಲ್-27ರಿಂದ ಮೇ-1ರವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಏಪ್ರಿಲ್-28 ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ದಶರಥರಾಮೇಶ್ವರ ವಜ್ರದಲ್ಲಿ ಗಂಗಾ ಪೂಜೆ ನಂತರ ಯಲ್ಲದಕೆರೆಯ 101 ಲಿಂಗೇಶ್ವರ ದೇವಸ್ಥಾನದಿಂದ ಚಿಗಳಿಕಟ್ಟೆವರೆಗೂ 108 ಸುಮಂಗಲಿಯರಿಂದ ಪೂರ್ಣಕುಂಭ 5 ಕಿ.ಮೀ ಮೆರವಣಿಗೆ ಹಾಗೂ ಜನಪದ ಕಲಾ ತಂಡಗಳಿಂದ ಮೆರವಣಿಗೆ ಇರುತ್ತದೆ.

ಏಪ್ರಿಲ್-29ರ ಮಂಗಳವಾರ ಸಕಲ ದೇವರುಗಳ ಆಗಮನ ಹಾಗೂ ಹೋಮ ಹವನ ಮತ್ತು ವಿಶೇಷ ಪೂಜೆಗಳು ನಡೆಯುತ್ತವೆ.
ಅಮ್ಮಹಟ್ಟಿ ಶ್ರೀಜೋಡಿ ರಂಗನಾಥ ಸ್ವಾಮಿ, ಹೊಸಳ್ಳಿ ಶ್ರೀಆಂಜನೇಯ ಸ್ವಾಮಿ
, ಶ್ರೀ ಕಣಿವೆ ಮಾರಮ್ಮ ದೇವಿ, ಶ್ರೀ ಕಾಳಮ್ಮ ದೇವಿ, ಶ್ರೀ ಕಣಿವೆ ಮಾರಕ್ಕ ಚಿಗಳಿಕಟ್ಟೆ ದೇವರುಗಳ ಸಮಾಗಮ ನಡೆಯಲಿದೆ.

ಏ. 30ರ ಬುಧವಾರ ಬೆಳಗ್ಗೆ 6:30 ರಿಂದ ವಿವಿಧ ರೀತಿಯ ಹೋಮ ಹವನ ಪೂಜಾ ಕೈಂಕರ್ಯಗಳನ್ನು  ಹಾಗೂ ಕಳಸ ಪ್ರತಿಷ್ಠಾಪನೆ ನಡೆಸಲಾಗುವುದು ಎಂದು ಚಿಗಳಿ ಕಟ್ಟೆ ಶ್ರೀ ಭೂತೇಶ್ವರ ಸ್ವಾಮಿಯ ಸಮಿತಿಯವರು ತಿಳಿಸಿದ್ದಾರೆ.
ಏಪ್ರಿಲ್-27ರ  ಭಾನುವಾರದಿಂದ ಮೇ-01ರ ಗುರುವಾರದ ತನಕ ಐದು ದಿನಗಳ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಭೂತೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಮತ್ತು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

 

 

Share This Article
error: Content is protected !!
";