ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಂದಿನ ಮಾಸಿಕ ಗಮಕ ಕಾರ್ಯಕ್ರಮವು ಜನವರಿ-19ರ ಭಾನುವಾರ ಸಂಜೆ ನಗರದ ಜೆಸಿಆರ್ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಲಿದ್ದು ಗಮಕಿ ಅಂಶು ಅನಂತ್ ಅವರ ಕುಮಾರವ್ಯಾಸ ಭಾರತದ ಉದ್ಯೋಗ ಪರ್ವದ ” ಕರ್ಣಭೇದನ” ಅಥವಾ “ಕೌರವೇಂದ್ರನ ಕೊಂದೆ ನೀನು” ಎಂಬ ಪ್ರಸಂಗದ ವಾಚನ ಮಾಡುವರು.
ಗ.ವಿ. ಡಾ. ರಾಜೀವಲೋಚನ ವ್ಯಾಖ್ಯಾನ ಮಾಡುವರು. ಸ್ಥಳೀಯ ಆರ್ಯವೈಶ್ಯ ಮಂಡಳಿಯ ವಿಶ್ರಾಂತ ಅಧ್ಯಕ್ಷ ಎಸ್.ಎನ್. ಕಾಶಿವಿಶ್ವನಾಥ ಶ್ರೇಷ್ಠಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.