ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯದ ಗರಿಷ್ಟ ಮಟ್ಟ 130 ಅಡಿ ತಲುಪಿದಾಗ ಹಿನ್ನೀರಿನಲ್ಲಿ ಮುಳುಗಡೆಯಾದ ಯಾವುದಾದರೂ ಪಟ್ಟ ಜಮೀನುಗಳಿದ್ದಲ್ಲಿ ಮತ್ತು ಅಂತಹ ಜಮೀನುಗಳಿಗೆ ಈ ಹಿಂದೆ ಭೂ ಪರಿಹಾರ ವಿತರಿಸದೇ ಇದ್ದಲ್ಲಿ ಅಂತಹ ಜಮೀನುಗಳನ್ನು ಪರಿಶೀಲಿಸುವ ಸಂಬಂಧ ಹಿನ್ನೀರಿನ ಅಂಚಿನಲ್ಲಿರುವ ಗ್ರಾಮಗಳಿಗೆ ಇದೇ ಜೂನ್ 04 ಮತ್ತು 06ರಂದು ಜಲಸಂಪನ್ಮೂಲ ಇಲಾಖೆಯ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್‍ಗಳು, ಕಂದಾಯ ಇಲಾಖೆಯ ತಹಶೀಲ್ದಾರ್, ಗ್ರಾಮ ಆಡಳಿತಾಧಿಕಾರಿಗಳು, ಶಿರಸ್ತೆದಾರರು ಹಾಗೂ ಇತರೆ ಅಧಿಕಾರಿಗಳ ತಂಡ ಅಹವಾಲು ಸಭೆಯನ್ನು ಹಿನ್ನೀರಿನ ಅಂಚಿನಲ್ಲಿರುವ ಗ್ರಾಮ ಪಂಚಾಯಿತಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜೂನ್ 04ರಂದು ಬೆಳಿಗ್ಗೆ 11 ರಿಂದ 12.30 ರವರೆಗೆ ಲಕ್ಕಿಹಳ್ಳಿ, ಮಧ್ಯಾಹ್ನ 1 ರಿಂದ 3.30 ರವರೆಗೆ ಅತ್ತಿಮಗ್ಗೆ ಹಾಗೂ ಸಂಜೆ 4 ರಿಂದ 5.30 ರವರೆಗೆ ಹುಣವಿನಡುವಿನಲ್ಲಿ ಅಹವಾಲು ಸಭೆ ನಡೆಯಲಿದೆ.
ಜೂನ್ 06ರಂದು ಬೆಳಿಗ್ಗೆ 11 ರಿಂದ 12.30 ರವರೆಗೆ ಕಾರೇಹಳ್ಳಿ, ಮಧ್ಯಾಹ್ನ 1 ರಿಂದ 3.30 ರವರೆಗೆ ಮತ್ತೋಡು ಹಾಗೂ ಸಂಜೆ 4 ರಿಂದ 5.30 ರವರೆಗೆ ಜಿ.ಎನ್.ಕೆರೆ ಗ್ರಾಮದಲ್ಲಿ ಸಭೆ ನಡೆಯಲಿದೆ.
ಹಿನ್ನೀರಿನಿಂದ ಮುಳುಗಡೆಯಾಗಿರುವ ರೈತರು ಸಭೆಗೆ ಹಾಜರಾಗಿ ಅಹವಾಲುಗಳನ್ನು ನೀಡಬಹುದಾಗಿದೆ ಎಂದು ಹೊಸದುರ್ಗ ವಿಶ್ವೇಶ್ವರಯ್ಯ ಜಲ ನಿಗಮದ ಭದ್ರಾ ಮೇಲ್ದಂಡೆ ಯೋಜನೆ ವಿಭಾಗ ನಂ.4ರ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆ ತಿಳಿಸಿದ್ದಾರೆ.