ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಹರಿಯಬ್ಬೆ ಗೆಳೆಯರ ಬಳಗದ ವತಿಯಿಂದ ವಿಜ್ಞಾನದೆಡೆಗೆ ಸರಣಿ-7ರ ಅಂಗವಾಗಿ ಮಗುವಿಗೊಂದು ಗಿಡ ಶಾಲೆಗೊಂದು ವನ ಎಂಬ ಘೋಷಣೆಯೊಂದಿಗೆ 300 ಗಿಡಗಳನ್ನು ನೆಡುವ ಹಸಿರು ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ವಿಶ್ವ ಪರಿಸರ ದಿನದ ಅಂಗವಾಗಿ ಜೂನ್-5 ರಂದು ಬೆಳಿಗ್ಗೆ 10 ಗಂಟೆಗೆ ಹರಿಯಬ್ಬೆ ಪ್ರೌಢಶಾಲೆ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಜಗದೀಶ್ಚಂದ್ರ ಬೋಸ್ ಇಕೋ ಕ್ಲಬ್ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸುವರು.
ಶ್ರೀಗಿರಿ ವಾಲ್ಮೀಕಿ ಪರಿಸರ-ಪರಿವಾರ ಕುರಿತು ಮಾತನಾಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ ತಿಪ್ಪೇಸ್ವಾಮಿ, ಬಿ ಸಿ ಶಿವಣ್ಣ ಟ್ರಸ್ಟ್ ಅಧ್ಯಕ್ಷ ವಕೀಲ ನಾಗರಾಜು, ಪ್ರಾಂಶುಪಾಲ ಕುಮಾರಯ್ಯ, ಉಪ ಪ್ರಾಂಶುಪಾಲ ರುದ್ರಮುನಿ, ಕೆಪಿಎಸ್ ಶಾಲೆ ಬಳಗ, ಎಸ್ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.