ಮಾರ್ಚ್-9ರಂದು  ಶನಿಮಹಾತ್ಮ ದೇವರ ಬ್ರಹ್ಮ ರಥೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಕನಸವಾಡಿಯಲ್ಲಿ ಶನಿಮಹಾತ್ಮನ ಬ್ರಹ್ಮ ರಥೋತ್ಸವ ಮಾ.
9ರಂದು ಮಧ್ಯಾಹ್ನ 1.35ಕ್ಕೆ ನಡೆಯಲಿದೆ. ಬ್ರಹ್ಮರಥೋತ್ಸವದ ಅಂಗವಾಗಿ ಒಂದು ವಾರ ನಡೆಯುವ ಜಾತ್ರೆಯಲ್ಲಿ ವಿವಿಧ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕೋತ್ಸವ ನಡೆಯಲಿವೆ.

ಬ್ರಹ್ಮರಥೋತ್ಸವದ ಅಂಗವಾಗಿ ಪ್ರತಿದಿನ ರಾತ್ರಿ ನಡೆಯುವ ನಾಟಕೋತ್ಸವದಲ್ಲಿ ಭಾಗವಹಿಸುವ ಪ್ರತಿ ತಂಡಗಳಿಗೆ ದೇವಾಲಯದ ವತಿಯಿಂದ 26.500 ಪ್ರೋತಾಹ ಧನ ನೀಡಲಾಗುವುದು ಎಂದು ದೇವಾಲಯದ ಧರ್ಮದರ್ಶಿ ಕೆ.ಪಿ.ಪ್ರಕಾಶ್ ತಿಳಿಸಿದ್ದಾರೆ.

- Advertisement - 

ಮಾ.8ರಂದು ರಾತ್ರಿ 6 ಗಂಟೆಗೆ ಗಣಪತಿ ಪ್ರಾರ್ಥನೆ, ಧ್ವಜಾರೋಹಣ, ವಿವಿಧ ಹೋಮಗಳು ನಡೆಯಲಿವೆ. ಮಾ.10 ರಂದು ರಾತ್ರಿ 7.30ಕ್ಕೆ ಬೆಳ್ಳಿ ರಥದಲ್ಲಿ ಕಾಕವಾಹನೋತ್ಸವ, ತಮಟೆ ವಾಧ್ಯ ವೀರಗಾಸೆ ನೃತ್ಯ, ಸಂಗೀತ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿವೆ. ಮಾ.11 ರಂದು ರಾತ್ರಿ 8 ಗಂಟೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ಮತ್ತು ಸಂಗೀತ ರಸಸಂಜೆ ನಡೆಯಲಿದೆ.

ಮಾ. 12 ರಂದು ರಾತ್ರಿ 9 ಗಂಟೆಗೆ ಚಂದ್ರ ಮಂಡಲೋತ್ಸವ, ಕೀಲುಕುದುರೆ ಕಾರ ಕ್ರಮ ನಡೆ ಯಲಿವೆ. ಮಾ. 14ರಂದು ಸಂಜೆ 7 ಗಂಟೆಗೆ ಕಾಕವಾಹನೋತ್ಸವ, ಸಂಗೀತ ಸಂಜೆ, ಮಾ.15ರಂದು ಬೆಳಿಗ್ಗೆ 9ಕೆಸುವ ಭಾತೋತ್ಸವ, ಡೊಳು ಕುಣಿತ ನಡೆಯಲಿದೆ.

- Advertisement - 

 

 

 

Share This Article
error: Content is protected !!
";