ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
“ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಪ್ರಸಾರ ಭಾರತಿ ಆಕಾಶವಾಣಿಯ ಕನ್ನಡ ಅಭಿಯಾನದ ಅಂಗವಾಗಿ ನಾಡು–ನುಡಿ ಸಂಸ್ಕøತಿಯ ಕುರಿತಾದ ವಿಶೇಷ ಸಂದರ್ಶನ ಸರಣಿಯಲ್ಲಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಬಂಜಗೆರೆ ಜಯಪ್ರಕಾಶ್ ಅವರೊಂದಿಗೆ ಆಕಾಶವಾಣಿಯ ಡಾ.ನವೀನ್ ಮಸ್ಕಲ್ ನಡೆಸಿದ
ವಿಶೇಷ ಸಂದರ್ಶನ ಭಾಗ–1 ಇದೇ ಮೇ.21ರಂದು ಬೆಳಿಗ್ಗೆ 8.30ಕ್ಕೆ ಪ್ರಸಾರವಾಗಲಿದೆ ಎಂದು ಪ್ರಸಾರ ಭಾರತಿ ಚಿತ್ರದುರ್ಗ ಆಕಾಶವಾಣಿ ಪ್ರಕಟಣೆ ತಿಳಿಸಿದೆ.