ಚಂದ್ರವಳ್ಳಿ ನ್ಯೂಸ್, ಶಿರಾ:
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಗುಣ್ಣಯ್ಯನಗುಡಿ ಸನ್ನಿಧಿಯಲ್ಲಿ ಶ್ರೀಗುಂಡಾಜನೇಯಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಇದೇ ಆಗಸ್ಟ್ 14 ಮತ್ತು 15ರಂದು ಶ್ರೀಗುಂಡಾಜನೇಯಸ್ವಾಮಿ ಶಿಖರ ಕಳಸ ಸ್ಥಾಪನೆ, ಬೆಳ್ಳಿ ವಿಗ್ರಹ, ಪ್ರಭಾವಳಿ ಅರ್ಪಣಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನವರು ತಿಳಿಸಿದ್ದಾರೆ.
ಆಗಸ್ಟ್-14ರಂದು ಸಂಜೆ ಗಂಗಾಪೂಜೆಸ ಪುಣ್ಯಾಹ ವಾಚನ, ಗಣಪತಿ ಪೂಜೆ, ಪಂಚಗವ್ಯವಿಧಿಃ, ಕೌತುಕ ಬಂಧನ ಸೇರಿದಂತೆ ಹೋಮ, ವಾಸ್ತು ಪೂಜೆ, ಬ್ರಹ್ಮ ಕಳಸ ಸ್ಥಾಪನೆ, ಆವಿವಾಸಗಳು, ನವಗ್ರಹ ಹೋಮ ಹಮ್ಮಿಕೊಳ್ಳಲಾಗಿದೆ.
ಆ.15 ರಂದು 4.30 ರಿಂದ ರಿಂದ 10 ಗಂಟೆಯವರೆಗೆ ಕಳಸ ಸ್ಥಾಪನೆ, ಕುಂಭ ಅಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಸ್ವಾಮಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ-12 ಗಂಟೆಗೆ ಆರತಿ ಸೇವೆ ಆಯೋಜನೆ ಮಾಡಲಾಗಿದೆ.
ಹರಿಯಬ್ಬೆ ಗ್ರಾಮದ ಯಶೋಧ, ಬಸವಾನಂದ, ಗಿರಿಜ, ಜಯರಾಜ್ ಇವರು ಶಿಬಿರ ಧಾನಿಗಳಾಗಿದ್ದಾರೆ. ಬಾರಿಮನೆ ಹರಿಯಬ್ಬೆ ಈರಣ್ಣ ಶಿವಮೊಗ್ಗ, ಅನುಸೂಯಮ್ಮ, ರಾಮಚಂದ್ರಪ್ಪ, ಖಂಡೇನಹಳ್ಳಿ ಪಾಳ್ಯದ ಕವಿತ, ರಮೇಶ್ ಬಾಬು, ಹರಿಯಬ್ಬೆ ಗ್ರಾಮದ ಡಾ.ಕಾವ್ಯ, ಎಸ್.ಆರ್ ವಿನಯ್, ಕೆ.ಗುಣ್ಣಯ್ಯ, ಹರಿಯಬ್ಬೆ ನಾಚೇನಹಳ್ಳಿ ಗುಂಡೇಗೌಡ, ಹೆಚ್.ಬಿ ಗುಂಡಪ್ಪ, ರುಕ್ಮಿಣಿ, ಮಹಾಲಿಂಗಪ್ಪ ಇವರು 15.50 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ಅರ್ಪಣೆ ಮಾಡಲಿದ್ದಾರೆ.
ನಂಜಾವಧೂತ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಿರಾ ಕ್ಷೇತ್ರದ ಶಾಸಕ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅಧ್ಯಕ್ಷತೆ ವಹಿಸುವರು. ಸಂಸದ ಗೋವಿಂದ್ ಎಂ.ಕಾರಜೋಳ, ವಿಪ ಸದಸ್ಯರಾದ ಚಿದಾನಂದ ಎಂ.ಗೌಡ, ಡಿ.ಟಿಶ್ರೀನಿವಾಸ್, ರಾಜೇಂದ್ರ ರಾಜಣ್ಣ ಸೇರಿದಂತೆ ಮತ್ತಿತರ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.
ಎರಡು ದಿನ ಕಾರ್ಯಕ್ರಮದಲ್ಲಿ ವೀರಗಾಸೆ ಸೇರಿದಂತೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸರ್ವ ಭಕ್ತರು ಆಗಮಿಸುವಂತೆ ಶ್ರೀ ಗುಂಡಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

