ಜೂ 5 ಮತ್ತು 6ರಂದು ಕ್ಷಿಪ್ರ ಪ್ರಸಾದ ಮಹಾಗಣಪತಿ ದೇವಸ್ಥಾನದ ವಾರ್ಷಿಕೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಧವಳಗಿರಿ ಬಡಾವಣೆ
2ನೇ ಹಂತದಲ್ಲಿನ ಶ್ರೀ ಕ್ಷಿಪ್ರ ಪ್ರಸಾದ ಮಹಾಗಣಪತಿ ದೇವಸ್ಥಾನದಲ್ಲಿ ಇದೇ ಜೂನ್ 5 ಮತ್ತು 6ರಂದು ದೇವಸ್ಥಾನದ 12ನೇ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿದೆ.

- Advertisement - 

ಜೂ.5ರಂದು ಬೆಳಗ್ಗೆ 8ಕ್ಕೆ ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯದಿ ಋತ್ವಿಗ್ವರಣ, ಪಂಚಗವ್ಯ ಹವನ, ಕ್ಷಿಪ್ರ ಪ್ರಸಾದ ಮಹಾಗಣಪತಿ ಲಘುನ್ಯಾಸ ಪೂರ್ವಕ ರುದ್ರಾಭಿಷೇಕ ಮಹಾಭಿಷೇಕ ಪೂಜಾದಿಗಳು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ. ಸಂಜೆ 6ಕ್ಕೆ ಗಣೇಶ ಅಥರ್ವಶೀರ್ಷ ಪಾರಾಯಣ, ಋತ್ವಿಜರಿಂದ ಅಷ್ಠಾವಧಾನ ಮಂಗಳಾರತಿ. ಸಂಜೆ 6.30ಕ್ಕೆ ಕಲಾವಿದ ಡಿ..ಮುರಾರ್ಜಿ ಕಲಾ ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ನಂತರ ತೀರ್ಥ ಪ್ರಸಾದ ವಿನಿಯೋಗಿಸಲಾಗುತ್ತದೆ.

- Advertisement - 

ಜೂ.6ರಂದು ಬೆಳಗ್ಗೆ 8ಕ್ಕೆ ಶ್ರೀ ಕ್ಷಿಪ್ರ ಪ್ರಸಾದ ಮಹಾಗಣಪತಿಗೆ ಪಂಚಾಮೃತ ಸಹಿತ ರುದ್ರಾಭಿಷೇಕ ಹಾಗೂ ನವಗ್ರಹ ಪುರಸ್ಸರ ಅಷ್ಟದ್ರವ್ಯ ಮಹಾಗಣಪತಿ ಹೋಮ, ಪೂರ್ಣಾಹುತಿ, ಅಲಂಕಾರ, 12.30 ರಿಂದ ಅಷ್ಟಾವಧಾನ ಮಹಾ ಮಂಗಳಾರತಿ. ಮಧ್ಯಾಹ್ನ 1 ರಿಂದ ಅನ್ನ ಸಂತರ್ಪಣೆ, ಸಂಜೆ 6 ರಿಂದ ಧವಳಗಿರಿ ಬಡಾವಣೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲಕ್ಕೆ ಆಗಮಿಸಿ ಶ್ರೀ ಕ್ಷಿಪ್ರ ಪ್ರಸಾದ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕೆಂದು ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಧವಳಗಿರಿ ಬಡಾವಣೆಯ 2ನೇ ಹಂತದ ಸಮಸ್ತ ಭಕ್ತರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ. ಸಾಂಸ್øತಿಕ ಕಾರ್ಯಕ್ರಮಕ್ಕೆ ಹೆಸರನ್ನು ನೊಂದಾಯಿಸುವವರು 9880466192, 9449145416ಗೆ ಸಂಪರ್ಕಿಸುವಂತೆ ಕೋರಲಾಗಿದೆ.

- Advertisement - 

Share This Article
error: Content is protected !!
";