ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ;
ಬರುವ ಇದೆ ಐದರಂದು ಜಿಲ್ಲಾ ಯೋಗ ಸಂಸ್ಥೆ ,ಚಿತ್ರದುರ್ಗ, ಚಿತ್ರದುರ್ಗ ರೋಟರಿ ಕ್ಲಬ್ ಫೋರ್ಟ್ ,ಇನ್ನರ್ವಿಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಚಿತ್ರದುರ್ಗ ಜಿಲ್ಲಾ ವೀರಶೈವ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೀಲಕಂಠೇಶ್ವರ ಸ್ವಾಮಿ ಸಮುದಾಯವನಲ್ಲಿ ಬೆಳಗ್ಗೆ 5-30ರಿಂದ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ರಥಸಪ್ತಮಿಯ ಮಹತ್ವ-
ರಥಸಪ್ತಮಿಯನ್ನು ಅಚಲ ಸಪ್ತಮಿ, ಮಾಘಸಪ್ತಮಿ ಅಥವಾ ಸೂರ್ಯ ಸಪ್ತಮಿ ಎಂದು ಕರೆಯುವರು.ರಥಸಪ್ತಮಿಯನ್ನು ಬಹು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವುದು ಒಂದು ವಿಶೇಷ. ಹಾಗೇ ಇದು ವಿಶಿಷ್ಟ ಹಬ್ಬವಾಗಿದೆ. ರಥಸಪ್ತಮಿಯು ಮಾಘ ಮಾಸದ ಶುಕ್ಲ ಪಕ್ಷದ 7ನೇ ತಿಥಿ ಅಂದರೆ ಸಪ್ತಮಿಯ ದಿವಸದಂದು ಆಚರಿಸಲ್ಪಡುವ ಪದ್ಧತಿಯಾಗಿದೆ. ಸೂರ್ಯನ ಜನ್ಮದಿನವೆಂತಲೂ ಭಾವಿಸಲಾಗಿದೆ.
ನಮ್ಮ ರಾಷ್ಟ್ರದಲ್ಲಿ ಅಲ್ಲದೆ ಜಗತ್ತಿನ ಅನೇಕ ಭಾಗಗಳಲ್ಲಿಯೂ ರಥಸಪ್ತಮಿಯನ್ನು ಆಚರಿಸುವರು. 108 ನಾಮ ಜಪ ಅಲ್ಲದೆ ವಿಶೇಷವಾಗಿ ಯೋಗ ಸಾಧಕರು 108 ಸೂರ್ಯ ನಮಸ್ಕಾರಗಳನ್ನು ಸಾಮೂಹಿಕವಾಗಿ ಆಚರಿಸುತ್ತಾರೆ .ಈ ದಿನ ಅತ್ಯಂತ ಮಹತ್ವದ್ದಾಗಿರುವುದೇಕೆಂದರೆ ಸೂರ್ಯ ತನ್ನ ಪಥವನ್ನು ಅಂದರೆ ದಿಕ್ಕನ್ನು ಉತ್ತರಾಯಣದ ಕಡೆ ಬದಲಿಸುವ ದಿನ. ಇಂದಿನಿಂದ ಸೂರ್ಯನ ಓಜಸು, ತೇಜಸ್ಸು ಹೆಚ್ಚು ಪ್ರಖರತೆಯನ್ನು ಉಂಟು ಮಾಡಿ ಸಕಲ ಚರಾಚರ ವಸ್ತುಗಳ ಮೇಲೆ ಪ್ರಕೃತಿ ಮತ್ತು ಮಾನವನ ಬದುಕಿಗೆ ಚೈತನ್ಯವನ್ನು ಉಂಟುಮಾಡುವ ದಿನ.
ಸೂರ್ಯನು ಆರೋಗ್ಯದಾತನೆಂಬುದಾಗಿ, ವೇದವು ಅವನನ್ನು ಪ್ರಾರ್ಥಿಸಿದೆ. ವೇದಗಳು ಅಲ್ಲದೆ ಪುರಾಣಗಳು ಸಹ ಸೂರ್ಯನನ್ನು ರೋಗನಿವಾರಕನೆಂದು ಸಾರಿವೆ. ಸರ್ವವ್ಯಾಧಿಗಳು, ಮಹಾವ್ಯಾಧಿಗಳು ನಿವಾರಣೆಯಾಗುತ್ತದೆ ಎಂದು ಜನರಲ್ಲಿ ನಂಬಿಕೆ .ಸೂರ್ಯ ನಮಸ್ಕಾರಗಳಿಂದ ಬಲಸಂವರ್ಧನೆ, ಆರೋಗ್ಯ, ಆಯುಷ್ಯಾಭಿವೃದ್ದಿ, ಮನಃಶಕ್ತಿಸಂಚಯ, ಪ್ರಸನ್ನತೆ, ಉತ್ಸಾಹ, ಉಲ್ಲಾಸ ಮನಸ್ಸಿಗೆ ಆಗುತ್ತದೆ.
ಯೋಗ ಸಾಧಕರು ಸೇರಿದಂತೆ ಇತರೆ ಆಸಕ್ತಿಯುಳ್ಳವರು ಬನ್ನಿ. ನಾವೆಲ್ಲರೂ ಒಂದಾಗಿ ಸೇರಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ. ನಮ್ಮ- ನಿಮ್ಮ ಆರೋಗ್ಯ ವೃದ್ಧಿಗೆ ಸಂಕಲ್ಪ ಮಾಡೋಣ. ಹೆಚ್ಚಿನ ಮಾಹಿತಿಗಾಗಿ 99862 95285, 94481 44871, 9620653375.