ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40 ನೇ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಆಯೋಜಿಸುತ್ತಿರುವ ಮಾಸಿಕ ಗಮಕ ವಾಚನ -ವ್ಯಾಖ್ಯಾನ ಸಂಭ್ರಮದ 29ನೆಯ ಕಾರ್ಯಕ್ರಮವು ಡಿಸೆಂಬರ್-28ರ ಭಾನುವಾರ ಸಂಜೆ 6ಗಂಟೆಗೆ ನಗರದ ಜೆ. ಸಿ. ಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.
ನಿವೃತ್ತ ಪ್ರಾಂಶುಪಾಲ ಅನಂತ ಕೃಷ್ಣ ಜೋಯಿಸ್ ಇವರು ವಾಚನ ನಡೆಸಿಕೊಡಲಿದ್ದು, ವ್ಯಾಖ್ಯಾನವನ್ನು ವಿದ್ವಾನ್ ಗಣಪತಿ ಭಟ್, ನಿವೃತ್ತ ಉಪ ಪ್ರಾಧ್ಯಾಪಕರು, ಶಿವಮೊಗ್ಗ,ಇವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗಾಯತ್ರಿ ಶಿವರಾಮ್, ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ನ ಸಂಸ್ಥಾಪನಾಧ್ಯಕ್ಷೆ, ಚಿತ್ರದುರ್ಗ ಇವರು ಭಾಗವಹಿಸಲಿದ್ದಾರೆ.
ಡಿವಿಜಿ ಯವರ ‘ಕಾವ್ಯದ ಮಂಕುತಿಮ್ಮನ ಕಗ್ಗ ‘ದಿಂದ ಆಯ್ದ ಪದ್ಯಗಳಂಅನಾಧರಿಸಿದ್ದಾಗಿದ್ದು. ಕಲಾಭಿಮಾನಿಗಳು ಬನ್ನಿ, ಕಾವ್ಯವನ್ನು ಆಸ್ವಾದಿಸಿ, ಕಲಾ ವಿದರನ್ನು ಪ್ರೋತ್ಸಾಹಿಸಿ. ತಮ್ಮೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುವವರು, ಗಮಕ ಕಲಾಭಿಮಾನಿಗಳ ಸಂಘ ಹಾಗೂ ಜೆ.ಸಿ. ಆರ್. ಗಣಪತಿ ದೇವಾಲಯ ಸೇವಾ ಸಮಿತಿ, ಚಿತ್ರದುರ್ಗ.

