ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಅಜ್ಜಯ್ಯಗುಡಿ ರಸ್ತೆಯ ದೊಡ್ಡಹಟ್ಟಿಕಪ್ಪಿಲೆ ಬಳಿ ಆಟೋರಿಕ್ಷಾ ಹಸುವಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.
ಆಟೋಚಾಲಕ ನಾಗೇಶ ಚಳ್ಳಕೆರೆಯಿಂದ ನನ್ನಿವಾಳ ಕಡೆಗೆ ಸಾರ್ವಜನಿಕರನ್ನು ಹತ್ತಿಸಿಕೊಂಡು ಅತಿವೇಗವಾಗಿ ಆಟೋ ಚಲಾಯಿಸಿದ್ದು, ಅಡ್ಡಬಂದ ಹಸುವಿಗೆ ಡಿಕ್ಕಿ ಹೊಡೆದು ಆಟೋ ಪಲ್ಟಿಯಾಗಿದೆ.
ತೀರ್ವವಾಗಿ ಗಾಯಗೊಂಡ ಜಗಲೂರ ತಾಲ್ಲೂಕು ಕಲ್ಲದೇವಪುರದ ನಾಗರಾಜ(೪೫) ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಗೊರ್‍ಲಕಟ್ಟೆ ಗ್ರಾಮದ ಕಾಟಯ್ಯ, ಮಹಂತೇಶ್, ಜಯಮ್ಮ, ಗಿರೀಶ್, ಚಾಲಕ ನಾಗೇಶ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್‌ಐ ಕೆ.ಸತೀಶ್‌ನಾಯ್ಕ ಪ್ರಕರಣ ದಾಖಲಿಸಿದ್ಧಾರೆ.