ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ದೊಡ್ಡಬಳ್ಳಾಪುರ ದಿಂದ ಘಾಟಿಗೆ ಬರುವ ವಾಹನಗಳು ಡಿ. 13 ರಿಂದ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಕಾರು ಮತ್ತು ಬಸ್ಸುಗಳು ಲಾರಿಗಳು ದ್ವಿಚಕ್ರ ವಾಹನಗಳು
ಕಂಟನಕುಂಟೆ ಯಿಂದ ಹಾಡೋನಹಳ್ಳಿ ಮಾರ್ಗವಾಗಿ ಎಸ್ ಎಸ್ ಘಾಟಿ ಗೆ ತೆರಳಿ ನಂತರ ಮರಳಿ ಮಾಕಳಿ. ಮಾರ್ಗವಾಗಿ ಏಕಮುಖ ಸಂಚಾರದಲ್ಲಿ ತೆರಳಲು ಭಕ್ತಾದಿಗಳಿಗೆ ಸಾರ್ವಜನಿಕರಿಗೆ
ಪೊಲೀಸ್ ಉಪಾಧೀಕ್ಷಕರಾದ ಪಾಂಡುರಂಗ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ರವರು ತಿಳಿಸಿದ್ದಾರೆ.

