ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಮಾಧ್ಯಮ ಅಕಾಡೆಮಿ, ಫ್ಯಾಕ್ಟ್ ಶಾಲಾ ಯೂನಿವರ್ಸಿಟಿ ನೆಟ್ವರ್ಕ್ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಯುಕ್ತಾಶ್ರಯದಲ್ಲಿ “ಪತ್ರಿಕೋದ್ಯಮ ಶಿಕ್ಷಕರ ಸಬಲೀಕರಣ –ಮಾಧ್ಯಮ ಸಾಕ್ಷರತೆ ಮತ್ತು ಕೌಶಲ್ಯಗಳ ಉನ್ನತೀಕರಣ” ತರಗತಿಗಳ ಮುಖೇನ ಮಾಧ್ಯಮ ಮತ್ತು ಶಿಕ್ಷಣದ ಮಧ್ಯದ ಅಂತರ ನಿವಾರಣೆ ಕುರಿತ ಆನ್ಲೈನ್ ಕಾರ್ಯಾಗಾರವನ್ನು ಮೇ 16 ರಂದು ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಹಾಗೂ ಹಿರಿಯ ಪತ್ರಕರ್ತೆ ಪ್ರೊ. ಕಂಚನ್ ಕೌರ್ ಮತ್ತು ಪ್ರಜಾವಾಣಿಯ ಉಪ ಮುಖ್ಯ ಸಂಪಾದಕರಾದ ಶ್ರೀಮತಿ ರಶ್ಮಿ.ಎಸ್. ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ಮಾಧ್ಯಮ ಸಾಕ್ಷರತೆಯನ್ನು ತಮ್ಮ ಬೋಧನಾ ಅಭ್ಯಾಸದಲ್ಲಿ ಪರಿಣಾಮಕಾರಿಯಾಗಿ ಸಂಯೋಜಿಸಲು ಶಿಕ್ಷಕರನ್ನು ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಆನ್ಲೈನ್ ಕಾರ್ಯಾಗಾರ ಹೊಂದಿದೆ. ಆನ್ಲೈನ್ ಕಾರ್ಯಾಗಾರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು
ಮತ್ತು ಶಿಕ್ಷಕರು ಮೇ 14 ರೊಳಗಾಗಿ ಇ–ಮೇಲ್: karnatakamediaacademy@gmail.com ನಲ್ಲಿ ನೊಂದಾಯಿಸಿಕೊಳ್ಳತಕ್ಕದ್ದು ಹಾಗೂ ಆನ್ಲೈನ್ ಕಾರ್ಯಾಗಾರ ಲಿಂಕ್ https://meet.google.cim/eyg-tpjs-wxi ಮೂಲಕ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.