ಸತ್ತಿದ್ದು 11 ಜನ ಮಾತ್ರವಲ್ಲ, ಹೃದಯಹೀನ ಕಾಂಗ್ರೆಸ್ ಪಕ್ಷದ ಸರ್ಕಾರವೂ ಸತ್ತು ಹೋಗಿದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎದೆ ಎತ್ತರಕ್ಕೆ ಬೆಳೆದ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರು, ಆಕ್ರಂದನ ನಮ್ಮ ಮನಸನ್ನ ತಲ್ಲಣಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ ಅವರು ಬಹುಶಃ ಕ್ರಿಕೆಟ್ ಆಟಗಾರರ ಜೊತೆ ತೆಗೆಸಿಕೊಂಡ ಸೆಲ್ಫಿ, ಪೋಟೋಗಳನ್ನು ನೋಡಿಕೊಂಡು ನಿನ್ನೆ ನಿಶ್ಚಿಂತೆಯಿಂದ ಮಲಗಿರಬಹುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

- Advertisement - 

ಆದರೆ ನನಗಂತೂ ನಿನ್ನೆ ರಾತ್ರಿ ಒಂದು ಕ್ಷಣವೂ ಕಣ್ಣು ಮುಚ್ಚಲು ಸಾಧ್ಯವಾಗಲಿಲ್ಲ. ಕಷ್ಟಪಟ್ಟು ಸಾಕಿ ಸಲಹಿದ ಮಕ್ಕಳು, ಬಾಳಿ ಬದುಕಬೇಕಾದ ಮಕ್ಕಳನ್ನು ಕಳೆದುಕೊಂಡ ಪೋಷಕರ, ಕುಟುಂಬಸ್ಥರ ಕಣ್ಣೀರು, ನೋವು, ಶೋಕವೇ ಇಡೀ ರಾತ್ರಿ ಕಣ್ಣು ಮುಂದೆ ಬರುತ್ತಿತ್ತು ಎಂದು ಅಶೋಕ್ ನೋವು ತೋಡಿಕೊಂಡಿದ್ದಾರೆ.

- Advertisement - 

ನಿನ್ನೆ ಸತ್ತಿದ್ದು 11 ಜನ ಮಾತ್ರವಲ್ಲಮಾನವೀಯತೆ ಇಲ್ಲದ ಹೃದಯಹೀನ ಕರ್ನಾಟಕ ಕಾಂಗ್ರೆಸ್ ಪಕ್ಷವೂ ಕನ್ನಡಿಗರ ಪಾಲಿಗೆ ನಿನ್ನೆಯೇ ಸತ್ತು ಹೋಯಿತು ಎಂದು ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.

 

- Advertisement - 

 

Share This Article
error: Content is protected !!
";