ಚಂದ್ರವಳ್ಳಿ ನ್ಯೂಸ್, ಅಹಮದಾಬಾದ್:
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಕರೆಲ್ಲರೂ ಸುಟ್ಟು ಬೂದಿಯಾಗಿದ್ದು ಒಬ್ಬ ಪ್ರಯಾಣಿಕ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾನೆ.
ಅಹಮದಾಬಾದ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್ ಏರ್‌ಪೋರ್ಟ್‌ನಿಂದ ಹೊರಟ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲ ನಿಮಿಷಗಳಲ್ಲಿ ಪತನವಾಗಿದ್ದು ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್(40) ಮಾತ್ರ ಬದುಕುಳಿದಿದ್ದಾರೆ. ಅವರಿಗೆ ಎದೆ, ಕಣ್ಣು ಮತ್ತು ಕಾಲುಗಳಿಗೆ ಗಾಯಗಳಾಗಿವೆ.
ನಾನು ಎದ್ದು ಓಡಿದೆ. ವಿಮಾನದ ತುಂಡುಗಳು ಎಲ್ಲೆಡೆ ಬಿದ್ದಿದ್ದವು. ನನ್ನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಯಾರೋ ಕರೆದುಕೊಂಡ ಬಂದರು ಎಂದು ವಿಶ್ವಾಸ್ ಕುಮಾರ್ ರಮೇಶ್ ಹೇಳಿದ್ದಾರೆ.
ಪವಾಡ ಸದೃಶ್ಯ ವಿಶ್ವಾಸ್ ಕುಮಾರ್ ರಮೇಶ್ ವಿಮಾನದ ಎಮೆರ್ಜೆನ್ಸಿ ವಿಂಡೋದಿಂದ ಜಿಗಿದು ಪಾರಾಗಿದ್ದಾನೆ ಎನ್ನಲಾಗಿದೆ. ವಿಮಾದಲ್ಲಿ 11ಎ ಸೀಟ್ ನಲ್ಲಿ ಕುಳಿತಿದ್ದ ರಮೇಶ್ ಎಂಬಾತ ಬದುಕುಳಿದ ಅದೃಷ್ಠವಂತ. ರಮೇಶ್ ಬದುಕಿದ ಬಗ್ಗೆ ಹಿರಿಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರುವಾರ ಮಧ್ಯಾಹ್ನ 1.39ಕ್ಕೆ ವಿಮಾನ ಟೇಕ್ ಆಫ್ ಆಗಿ ಲಂಡನ್‌ಗೆ ಹೊರಟಿತ್ತು. ವಿಮಾನದಲ್ಲಿ 242 ಜನರಿದ್ದರು. ಆ ಪೈಕಿ 169 ಭಾರತೀಯರು, 53 ಬ್ರಿಟಿಷರು, 7 ಪೋರ್ಚುಗೀಸ್ ಮತ್ತು ಒಬ್ಬರು ಕೆನಡಾ ದೇಶದ ಪ್ರಜೆ ಇದ್ದರು.
246 ಮಂದಿ ಸಾವು-
ಈ ದುರಂತದಲ್ಲಿ ಒಟ್ಟು 246 ಮಂದಿ ಸಾವಿಗೀಡಾಗಿದ್ದು, ಈ ಪೈಕಿ 229 ವಿಮಾನ ಪ್ರಯಾಣಿಕರು, 10 ಮಂದಿ ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ ( ಮುಖ್ಯ ಪೈಲಟ ಸುಮಿತ್ ಸಭರ್ವಾಲ್ ಮತ್ತು ಕೋ ಪೈಲಟ್ ಕ್ಲೈವ್ ಕುಂದರ್) ಗಳು ಸೇರಿದ್ದರು.
ವಿಮಾನ ಡಿಕ್ಕಿಯಾದ ಬಿಜೆ ವೈದ್ಯಕೀಯ ಕಾಲೇಜಿನ 5 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ. ದುರಂತ ನಡೆದ ಸಂದರ್ಭದಲ್ಲಿ ವಿಮಾನ ಕೇವಲ 825 ಅಡಿ ಎತ್ತರದಲ್ಲಿತ್ತು ಎನ್ನಲಾಗಿದೆ.