ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರ ಹಂಚಿಕೆ ಸೂತ್ರ ಏನು ಎನ್ನುವುದು ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ಗೆ ಮಾತ್ರ ಗೊತ್ತಿದೆ. ಹೈಕಮಾಂಡ್ ಸುಮ್ಮನೆ ಇದ್ರೆ ನಾವು ಏನು ಅರ್ಥ ಮಾಡಿಕೊಳ್ಳೊದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಶ್ನಿಸಿದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂಬುದು ಸೆಟಲ್ ಆಗಿರುವ ವಿಚಾರ ಎಂಬ ಬಗ್ಗೆ ಯತೀಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆ. ನಾವು ಹೈಕಮಾಂಡ್ ಮೇಲೆ ಡಿಪೆಂಡ್ ಆಗಿದ್ದೇವೆ. ಅಧಿಕಾರ ಒಪ್ಪಂದ ಆಗಿದೆ ಅಂತ ಯಾರು ಹೇಳಿದ್ದು? ಹೈಕಮಾಂಡ್ನವರು ಹೇಳಿದ್ದಾರಾ? ಅದನ್ನು ಹೈಕಮಾಂಡ್ ಹೇಳಬೇಕು. ಅದರ ಬಗ್ಗೆ ಡಿಕೆಶಿ ಹೇಳಿರಬಹುದು. ಅದು ಅವರ ಅಭಿಪ್ರಾಯ. ಅವರಿಗೆ ಗೊತ್ತಿರುವ ವಿಚಾರ ನಮಗೆ ಗೊತ್ತಿಲ್ಲ. ಅವರು ಒಳಗೆ ಇದ್ರು. ಹೈಕಮಾಂಡ್ ಸುಮ್ಮನೆ ಇದ್ರೆ ಏನು ಅರ್ಥ ಮಾಡಿಕೊಳ್ಳೋದು ಎಂದು ಪರಮೇಶ್ವರ್ ಪ್ರಶ್ನಿಸಿದರು.
ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಆಗಿದ್ರೆ ಹೈಕಮಾಂಡ್ ಹೇಳಬಹುದು ಅಥವಾ ಕ್ರಮ ತಗೋಬಹುದು. ಹೈಕಮಾಂಡ್ ಏನೂ ಹೇಳದೇ, ಏನೂ ತೀರ್ಮಾನ ಮಾಡದೇ ನಮಗೆ ಕೇಳಿದ್ರೆ ಪ್ರಯೋಜನ ಇಲ್ಲ. ಹೈಕಮಾಂಡ್ಗೆ ಏನು ಮಾಡಬೇಕು, ಯಾವ ರೀತಿ ಮ್ಯಾನೇಜ್ ಮಾಡಬೇಕು ಅಂತ ಗೊತ್ತಿದೆ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡಬೇಕು ಎಂದು ಗೃಹ ಸಚಿವರು ತಾಕೀತು ಮಾಡಿದರು.
ಅಧಿಕಾರ ಹಂಚಿಕೆ ಕುರಿತು ಅನೇಕರು ಹೇಳಿಕೆಗಳನ್ನು ಕೊಡಬಹುದು. ಅವು ಹೇಳಿಕೆಗಷ್ಟೇ ಸೀಮಿತ ಆಗುತ್ತವೆ. ಆದ್ರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಪರಿಸ್ಥಿತಿ ಏನಿದೆ, ಎಲ್ಲವನ್ನು ಹೈಕಮಾಂಡ್ನವರು ಗಮನಿಸಿದ್ದಾರೆ. ಯಾವಾಗ ತೀರ್ಮಾನ ಮಾಡಬೇಕೋ, ಅದನ್ನು ಮಾಡ್ತಾರೆ. ಹೈಕಮಾಂಡ್ ಕರೆ ಬಂದರೆ ಮಾತ್ರ ಎಲ್ಲ ಇತ್ಯರ್ಥ ಆಗಲಿದೆ ಎಂದು ತಿಳಿಸಿದರು.

