ಮಾ.24 ರಂದು ಮಹಿಳೆಯರಿಗೆ ಕ್ರೀಡಾಕೂಟ, ನೊಂದಣಿಗೆ ಅವಕಾಶ

News Desk

ಚಂದ್ರವಳ್ಳಿ ನ್ಯೂಸ್, ವಿಜಯನಗರ (ಹೊಸಪೇಟೆ):
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಾರ್ಚ್ 24 ರಂದು
, ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಮಹಿಳೆಯರು ನೋಂದಣಿ ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಶ್ವೇತಾ ತಿಳಿಸಿದ್ದಾರೆ.

ಜಿಲ್ಲೆಯ ಒಳ ಕ್ರೀಡಾಂಗಣದಲ್ಲಿ (ಕೇರಂ, ಶಟಲ್ ಕಾಕ್, ಚೆಸ್, ಬೆಂಕಿಯಿಲ್ಲದ ಅಹಾರ ತಯಾರಿಕೆ) ಹಾಗೂ ಹೊರ ಕ್ರೀಡಾಂಗಣದಲ್ಲಿ (ನೂರು ಮೀಟರ್ ಓಟ, ಕಬಡ್ಡಿ, ಥ್ರೋಬಾಲ್, ಕ್ರಿಕೇಟ್, ಶಾಟ್‌ಪುಟ್) ಕ್ರೀಡೆಗಳನ್ನು ಆಯೋಜಿಸಲಾಗಿರುತ್ತದೆ.

ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತ ಮಹಿಳೆಯರು, ವಿವಿಧ ಇಲಾಖೆಯ ಮಹಿಳಾ ಸಿಬ್ಬಂದಿಗಳು ಮಾರ್ಚ್.24 ರೊಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ : 9743344556, 7975397485 ಕರೆ ಮಾಡಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

Share This Article
error: Content is protected !!
";