ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಪಕ್ಷಗಳು ಮತ್ತೊಮ್ಮೆ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ! ಎಂದು ಬಿಜೆಪಿ ತರಾಟೆ ತೆಗೆದುಕೊಂಡಿದೆ.
ಮನರೇಗಾ(MGNREGA) ಅನ್ನು ರದ್ದುಗೊಳಿಸಲಾಗಿಲ್ಲ, ಬದಲಿಗೆ ಇನ್ನಷ್ಟು ಬಲಪಡಿಸಲಾಗಿದೆ ! ಎಂದು ಬಿಜೆಪಿ ತಿಳಿಸಿದೆ.
100 ರಿಂದ 125 ದಿನಗಳ ಉದ್ಯೋಗ ಖಾತರಿ, ವಾರಕ್ಕೊಮ್ಮೆ ಪಾವತಿ, ತಿಂಗಳುಗಳ ಕಾಲ ವಿಳಂಬವಿಲ್ಲ, ಬಯೋಮೆಟ್ರಿಕ್ ಆಧಾರಿತ ಪಾರದರ್ಶಕತೆ, ಕೃಷಿ ಸಮಯದಲ್ಲಿ 60 ದಿನಗಳ ವಿರಾಮ, ಇದು ಗ್ರಾಮೀಣ ಭಾರತದ ಉತ್ಥಾನ! ಪೂರ್ತಿ ಸತ್ಯ ತಿಳಿಯಿರಿ ವದಂತಿಗಳನ್ನು ನಂಬದಿರಿ, ಸತ್ಯದ ಮೇಲೆ ನಂಬಿಕೆ ಇಡಿ ಎಂದು ಬಿಜೆಪಿ ತಾಕೀತು ಮಾಡಿದೆ.
ವಿಬಿ -ಜಿ ರಾಮ್‌ಜಿ ಕಾಯ್ದೆ ಯಾವುದೇ ಕಾರಣಕ್ಕೂ ಉದ್ಯೋಗವನ್ನು ಕಸಿದುಕೊಳ್ಳುತ್ತಿಲ್ಲ. ರಸ್ತೆ, ಗಟಾರ, ಕುಡಿಯುವ ನೀರು, ಶಾಲೆಗಳ ಅಭಿವೃದ್ಧಿ ಸೇರಿದಂತೆ ಮೂಲಸೌಲಭ್ಯದ ಬಗ್ಗೆ ಯೋಜನೆಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ.
2047 ರ ವಿಕಸಿತ ಭಾರತವನ್ನು ಗುರಿಯಾಗಿಟ್ಟುಕೊಂಡು ಗ್ರಾಮ ಭಾರತದ ಪ್ರಗತಿಗೆ ಆದ್ಯತೆ ನೀಡಲಾಗಿದೆ. ವದಂತಿಗಳಿಗೆ ಕಿವಿಗೊಡದಿರೋಣ ಎಂದು ಬಿಜೆಪಿ ಸಲಹೆ ನೀಡಿದೆ.
MGNREGA vs VB-G RAM G, ವ್ಯತ್ಯಾಸ ತಿಳಿಯಿರಿ. ಉದ್ಯೋಗದ ಅವಧಿ, ಕೂಲಿ ಪಾವತಿಯಲ್ಲಿ ವೇಗ, ಕೃಷಿ ಸಮಯದಲ್ಲಿ ವಿರಾಮ ತಾಂತ್ರಿಕ ಸುಧಾರಣೆಗಳು ಈ ಹೊಸ ಕಾನೂನಿನಿಂದ ಕೋಟ್ಯಂತರ ಕುಟುಂಬಗಳ ಜೀವನದಲ್ಲಿ ಹೊಸ ಬದಲಾವಣೆ ಬರಲಿದೆ ಎಂದು ಬಿಜೆಪಿ ತಿಳಿಸಿದೆ.

