ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೊತ್ವಾಲ್‌ಶಿಷ್ಯನ ಗೂಂಡಾಗಿರಿಯ ಧಮ್ಕಿ ಮಾತುಗಳಿಗೆ ವಿರೋಧ ಪಕ್ಷಗಳು, ಕಾರ್ಯಕರ್ತರು ಹೆದರುತ್ತಾರೆ ಎಂದುಕೊಂಡಿದ್ದರೇ, ಅದು ಡಿಕೆ ಶಿವಕುಮಾರ್ ಮೂರ್ಖತನ ಅಷ್ಟೇ ಎಂದು ಜೆಡಿಎಸ್ ಹರಿಹಾಯ್ದಿದೆ.
ಬೀದಿ ಪುಂಡರಂತೆ ಹೇಳಿಕೆ ಕೊಡುವ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೇ, ನಿಮ್ಮ ಗೊಡ್ಡು ಬೆದರಿಕೆಗಳಿಗೆ ವಿಪಕ್ಷಗಳು ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ, ಹೋರಾಟ ನಿಲ್ಲಿಸುವುದು ಇಲ್ಲ.
ರಾಜ್ಯದಲ್ಲಿ ಬೆಲೆ ಏರಿಕೆ ಬರೆ ಹಾಕುತ್ತಾ ದುರಾಡಳಿತ ನಡೆಸುತ್ತಿರುವ, ಜನ ವಿರೋಧಿ, ರೈತ ವಿರೋಧಿ, ಜಾತಿ ವಿಭಜಕ, ತುಷ್ಠೀಕರಣದ ಓಲೈಕೆ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನರ ಆಕ್ರೋಶದ ಕಟ್ಟೆ ಒಡೆದಿದೆ.
ದುಷ್ಟ, ಕಡು ಭ್ರಷ್ಟ ಕಾಂಗ್ರೆಸ್‌ಸರ್ಕಾರದ ವಿರುದ್ಧ ನಾಡಿನ ರೈತರ ಮತ್ತು ಜನರ ಪರ ಧ್ವನಿಯಾಗಿ ನಮ್ಮ ಹೋರಾಟಗಳು ನಿರಂತರವಾಗಿ ನಡೆಯಲಿದೆ. ಸಾಧ್ಯವಾದರೇ ತಡೆದು ತೋರಿಸಿ ಎಂದು ಜೆಡಿಎಸ್ ಸವಾಲ್ ಹಾಕಿದೆ.