ನ್ಯಾಯಾಲಯದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕಲು ಆದೇಶ

News Desk

ಚಂದ್ರಳ್ಳಿ ನ್ಯೂಸ್ ಹಿರಿಯೂರು:
 ನ್ಯಾಯಾಲಯದ ಅವರಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಹಾಕಬೇಕೆಂಬ ಆದೇಶ ಆಗಿದ್ದು ಸಂತೋಷದ ವಿಷಯ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೈನ್ಯ ರಾಜ್ಯ ಕಾರ್ಯದರ್ಶಿ ಕೆ ರಾಮಚಂದ್ರಪ್ಪ ಸಂತೋಷ ವ್ಯಕ್ತಪಡಿಸಿದರು.

ಕರ್ನಾಟಕ ಹೈಕೋರ್ಟ್  ಪ್ರಧಾನ ಪೀಠ ಧಾರವಾಡ ಮತ್ತು ಕಲಬುರ್ಗಿ ಪೀಠ ಸೇರಿ ರಾಜ್ಯದ ಎಲ್ಲಾ ಕೋರ್ಟ್ ಹಾಲ್ ಗಳಲ್ಲಿ ಸಂವಿಧಾನ ಶಿಲ್ಪಿ ಡಾ” ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಹಾಕಬೇಕು ಎಂದು ಸೂಚಿಸಿ ಹೈ ಕೋರ್ಟ್ ರಿಜಿಸ್ಟರ್ ಜನರಲ್ ನೋಟಿಫಿಕೇಶನ್ ಹೊರಡಿಸಿದ್ದಾರೆ.

- Advertisement - 

ರಾಜ್ಯ ಹೈಕೋರ್ಟ್ 3 ಪೀಠಗಳ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಕೋರ್ಟ್ ಹಾಲ್ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕಬೇಕು ಎಂದು ಸಾರ್ವಜನಿಕರು ಮತ್ತು ವಕೀಲರು ವಿವಿಧ ಸಂಘ ಸಂಸ್ಥೆಗಳು ಮನವಿ ಸಲ್ಲಿಸಲಾಗಿತ್ತು.

ಈ ವಿಚಾರವಾಗಿ ರಾಜ್ಯ ಸರ್ಕಾರ ಕಾಲ ಕಾಲಕ್ಕೆ ಪತ್ರ ಬರೆದಿತ್ತು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಹಾಗೂ 2025ರ ಏಪ್ರಿಲ್ 26ರಂದು ನಡೆದ ಹೈಕೋರ್ಟ್ ನ ಎಲ್ಲಾ ನ್ಯಾಯಮೂರ್ತಿಗಳ (ಫುಲ್ ಕೋರ್ಟ್) ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಅಂಬೇಡ್ಕರ್ ಅವರ ಭಾವಚಿತ್ರ ಹಾಕಬೇಕು ಎಂದು ಸೂಚಿಸಿ ರಿಜಿಸ್ಟರ್ ಜನರಲ್ ಕೆ.ಎಸ್. ಭರತ್ ಕುಮಾರ್ ನೋಟಿಫಿಕೇಷನ್ ಹೊರಡಿಸಿದ್ದಾರೆ.

- Advertisement - 

 ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ್ ಗೌಡ ಅವರು 26/01/2022 ರಂದು ಅಂಬೇಡ್ಕರ್ ರವರ ಫೋಟೋ ತೆಗೆದರೆ ಮಾತ್ರ ನಾನು ಧ್ವಜಾರೋಹಣ ಮಾಡುವುದು ಎಂದು ಹೇಳಿ ಬಾಬಾ ಸಾಹೇಬರಿಗೆ ಅಪಮಾನ  ಮಾಡಿದ್ದರು ಇವರ ವಿರುದ್ಧ ದಿನಾಂಕ 19/2/2022 ರಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆ ಮಾಡಲಾಗಿತ್ತು.

  ಅನೇಕ ಸಂಘಟನೆಗಳ ಮುಖಂಡರುಗಳು ಮತ್ತು ನಾಯಕರಗಳು ಮತ್ತು ಕಾರ್ಯಕರ್ತರಿಗೆ ಆ ಪ್ರತಿಭಟನೆಯ ಫಲ ದೊರೆಕಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕೆ ರಾಮಚಂದ್ರ ಅಭಿಪ್ರಾಯಪಟ್ಟರು.

Share This Article
error: Content is protected !!
";