ಚಂದ್ರವಳ್ಳಿ ನ್ಯೂಸ್, ಬೆಂಗಳೂರು ಗ್ರಾಮಾಂತರ:
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆ ವಾರ್ಡ್ ನ ಆರ್ ಬಿ ಐ ಬಡಾವಣೆಯಲ್ಲಿರುವ ಶಾಸಕರ ಕಚೇರಿಗೆ ಭೇಟಿ ನೀಡಿದರು.
ಶಾಸಕರ ಕಚೇರಿ ಸಮೀಪದ ಸ್ಥಳದಲ್ಲೇ ಇರುವ ನಮ್ಮ ಕ್ಲಿನಿಕ್ ಗೆ ತೆರಳಿ ಪರಿಶೀಲನೆ ನಡೆಸಿದರು.
ನಮ್ಮ ಕ್ಲಿನಿಕ್ ನಲ್ಲಿ ಲಭ್ಯವಿರುವ ವ್ಯವಸ್ಥೆ, ರೋಗಿಗಳ ಅನುಕೂಲತೆ, ದೈನಂದಿನ ಚಟುವಟಿಕೆಗಳ ಬಗ್ಗೆ ವಿಚಾರಿಸಿ ಆಸ್ಪತ್ರೆ ಬರುವಂತ ರೋಗಿಗಳ ಜೊತೆಗೆ ಆತ್ಮೀಯವಾಗಿ ವರ್ತಿಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ ಕೃಷ್ಣಪ್ಪ, ಕಾರ್ಪೊರೇಟರ್ ಗಳಾದ ಸೋಮಣ್ಣ, ಜಯರಾಮಣ್ಣ, ಸಿ ನಾರಾಯಣ, ಇತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.